ಕಾರ್ಕಳ : ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ವಿಪರೀತ ಮಳೆಯ ಕಾರಣ ರೆಂಜಾಳ ಗ್ರಾಮದ ಹೆರ್ಮೆ ಪ್ರದೇಶದಲ್ಲಿ ನಡೆದ ಭೂಕುಸಿತ ಸ್ಥಳಕ್ಕೆ ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದ ರಾವ್ ನೇತೃತ್ವದ ಕಾಂಗ್ರೆಸ್ ನಿಯೋಗವು ಭೇಟಿ ನೀಡಿ ಸ್ಥಳ ಪರಿಶಿಲನೆ ನಡೆಸಿತು.
ಭೂಕುಸಿತದ ವ್ಯಾಪ್ತಿಗೆ ಒಳಪಡುವ ಪರಿಸರದ ಮನೆಗಳನ್ನು ಸ್ಥಳಾಂತರಿಸುವ ಕೆಲಸ ಈಗಾಗಲೆ ನಡೆದಿದ್ದು, ಇನ್ನೂ ಸ್ಥಳಾಂತರದ ಅಗತ್ಯವಿದ್ದರೆ ಅಂತಹ ಕುಟುಂಬಕ್ಕೆ ವಸತಿಯನ್ನು ಕಲ್ಪಿಸಲು ಕಾಂಗ್ರೆಸ್ ಪಕ್ಷದ ವತಿಯಿಂದ ನೆರವು ನೀಡಲಾಗುವುದು ಎಂದು ಭರವಸೆ ನೀಡಿದರು. ಈ ಸಂದರ್ಭ ಭೂನ್ಯಾಯ ಮಂಡಳಿ ಸದಸ್ಯ ರಮೇಶ್ ಶೆಟ್ಟಿ, ಗ್ಯಾರಂಟಿ ಸಮಿತಿ ತಾಲೂಕು ಅಧ್ಯಕ್ಷ ಅಜಿತ್ ಹೆಗ್ಡೆ ಮಾಳ, ಕೆ.ಎಂ.ಎಫ್. ನಿರ್ದೇಶಕ ಸುಧಾಕರ್ ಶೆಟ್ಟಿ, ಪುರಸಭೆಯ ಮಾಜಿ ಸದಸ್ಯ ವಿವೇಕ್ ಶೆಣೈ, ಸಂದೇಶ್ ಜೈನ್ ಉಪಸ್ಥಿತಿತರಿದ್ದರು.
















