ಕಾರ್ಕಳ ತಾಲೂಕು ಸಮಿತಿಯ ಅಧ್ಯಕ್ಷರಾಗಿ ರಿಚಾರ್ಡ್ ಮಿರಾಂದ
ಕಾರ್ಕಳ : ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ ಕಾರ್ಕಳ ತಾಲೂಕು ಸಮಿತಿಯ ನೂತನ ಅಧ್ಯಕ್ಷರಾಗಿ ಕಾರ್ಕಳ ಮಿರಾಂದ ಇಲೆಕ್ಟ್ರಿಕಲ್ಸ್‌ನ ರಿಚಾರ್ಡ್ ಮಿರಾಂದ ಆಯ್ಕೆಯಾಗಿದ್ದಾರೆ. ಆ. 1ರಂದು ಕಾರ್ಕಳ ಇನ್ ಸಭಾಂಗಣದಲ್ಲಿ ನಡೆದ ಸಮಿತಿಯ ಮಹಾಸಭೆಯಲ್ಲಿ 2026-2031ರ ಅವಧಿಗೆ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಉಡುಪಿ ವಿದ್ಯುತ್ ಗುತ್ತಿಗೆದಾರರ ಸಂಘದ ಜಿಲ್ಲಾಧ್ಯಕ್ಷ ಶ್ರೀಕಾಂತ್ ಶೆಣೈ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಉಪಾಧ್ಯಕ್ಷರಾಗಿ ಸದಾನಂದ ಸಾಲಿಯಾನ್ (ಸಾಲಿಯಾನ್ ಇಲೆಕ್ಟ್ರಿಕಲ್ಸ್ ಕೆರ್ವಾಶೆ) ಹರೀಶ್ ಕುಂದರ್ (ನೂತನ್ ಇಲೆಕ್ಟ್ರಿಕಲ್ಸ್ ನಕ್ರೆ), ಕಾರ್ಯದರ್ಶಿಯಾಗಿ ಅನಿಲ್ ಎಸ್. ಪೂಜಾರಿ (ವಿವೇಕ್ ಇಲೆಕ್ಟ್ರಿಕಲ್ಸ್ ಮಾಳ), ಜತೆ ಕಾರ್ಯದರ್ಶಿಯಾಗಿ ವಿಜಯ್ ಎಂ. ರಾವ್ (ಕುಷಿ ಇಲೆಕ್ಟ್ರಿಕಲ್ಸ್ ದುರ್ಗಾ), ಕೋಶಾಧಿಕಾರಿಯಾಗಿ ಮಂಝೂರ್ ಅಹ್ಮದ್ (ಬೈಲೂರು ಇಲೆಕ್ಟ್ರಿಕಲ್ಸ್ ಬೈಲೂರು) ಸಂಘಟನಾ ಕಾರ್ಯದರ್ಶಿಯಾಗಿ ದಿನೇಶ್ ನಾಯಕ್ ಕಡ್ತಲ, ಕ್ರೀಡಾ ಕಾರ್ಯದರ್ಶಿಯಾಗಿ ರತ್ನವರ್ಮ ಅಜ್ರಿ ಕಾರ್ಕಳ, ಪ್ರಚಾರ ಸಮಿತಿ ಅಧ್ಯಕ್ಷರಾಗಿ ರವೀಂದ್ರ ಎಸ್. ಪೂಜಾರಿ ಶಿರ್ಲಾಲು, ಹೋರಾಟ ಸಮಿತಿ ಅಧ್ಯಕ್ಷರಾಗಿ ಉದಯ ಕುಮಾರ್ ತೆಳ್ಳಾರ್, ಗೌರವ ಸಲಹೆಗಾರರಾಗಿ ಶಂಕರ ದೇವಾಡಿಗ, ನಾರಾಯಣ ರಾವ್, ರಮೇಶ್ಚಂದ್ರ, ಮಹಾಬಲ ಮೊಯಿಲಿ, ಸಂಪತ್ ಜಿ. ಶೆಟ್ಟಿ, ಶುಭಕರ ಕೆ.
ಕಾರ್ಯಕಾರಿ ಸಮಿತಿ ಸದಸ್ಯರಾಗಿ ಶಿವಾನಂದ ಕೆ. ಜಿ., ಪ್ರದೀಪ್ ಉಪಾದ್ಯಾಯ, ರತ್ನಾಕರ ಅಮೀನ್, ಸುರೇಶ್ ಶೆಟ್ಟಿ, ಸಂತೋಷ್ ಸೇರ್ವೆಗಾರ್, ದಿನೇಶ್ ಭಂಡಾರಿ, ಸಿಂಥೀಯಾ ಕ್ಯಾಸ್ಟಲಿನೋ, ಗಣೇಶ್, ಕಿಶನ್ ಕುಮಾರ್, ಸತ್ಯಕುಮಾರ್, ವಿನಯ್ ಕುಮಾರ್ ಶೆಟ್ಟಿ ಅವರು ಆಯ್ಕೆಯಾದರು.






















