ಮಟ್ಕಾ ಪ್ರಕರಣ : ಮೂವರು ವಶಕ್ಕೆ

ಕಾರ್ಕಳ : ಸಾಣೂರು ಗ್ರಾಮದ ಪುಲ್ಕೇರಿ ಬೈಪಾಸಿನ ಬಳಿ ಆ.3ರಂದು ಮಧ್ಯಾಹ್ನ ವೇಳೆ ಮಟ್ಜಾ ಜುಗಾರಿ ಆಟ ಆಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಕಾರ್ಕಳ ನಗರ ಪೊಲೀಸ್‌ ಠಾಣೆಯ ಪೊಲೀಸ್‌ ಉಪನಿರೀಕ್ಷಕ ಶಿವಕುಮಾರ್‌ ಎಸ್‌. ಆರ್‌. ಮತ್ತು ಸಿಬ್ಬಂದಿ ದಾಳಿ ಮಾಡಿದ್ದಾರೆ. ಆರೋಪಿತರಾದ ಅಂಬಾಗಿಲಿನ ಗುರುಪ್ರಸಾದ್(37), ಸಾಣೂರಿನ ರಾಜೇಶ (51) ಹಾಗೂ ಉಡುಪಿಯ ಪ್ರಮೋದ್ ಎಂಬವರನ್ನು 2630ರೂ. ನಗದು ಹಾಗೂ ಎರಡು ಮೊಬೈಲ್‌ಗಳೊಂದಿಗೆ ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.































error: Content is protected !!
Scroll to Top