8 ಮಂದಿಯ ಸ್ಥಳಾಂತರ
ಕಾರ್ಕಳ : ಕಾರ್ಕಳದಲ್ಲಿ ಕಳೆದ ಒಂದು ವಾರದಿಂದ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು ಪರಿಣಾಮ ಕೆಲವೆಡೆ ನೆರೆ ಭೀತಿ, ಭೂಕುಸಿತದ ಆತಂಕ ತಲೆದೋರಿದೆ. ನದಿ, ತೊರೆ, ಜಲಪಾತಗಳು ಧುಮ್ಮಿಕ್ಕಿ ಹರಿಯುತ್ತಿದೆ. ರೆಂಜಾಳ ಗ್ರಾಮದ ಹೆಡ್ಮೆಯ ಹರಿಪ್ರಸಾದ್ ಹಾಗೂ ಸುಮಿತ್ರಾ ಅವರ ಮನೆಗೆ ಭೂಕುಸಿತದ ಭೀತಿ ಎದುರಾಗಿದೆ. ಭೂಕುಸಿತದ ಭೀತಿಯಿಂದ 2 ಕುಟುಂಬದ 8 ಮಂದಿ ಸದಸ್ಯರನ್ನು ಸ್ಥಳಾಂತರಿಸಲಾಗಿದೆ. ಘಟನಾ ಸ್ಥಳಕ್ಕೆ ಕಾರ್ಕಳ ತಹಶೀಲ್ದಾರ್ ಪ್ರದೀಪ್ ಆರ್. ಭೇಟಿ ನೀಡಿದ್ದಾರೆ. ರೆಂಜಾಳ ಪ್ರಾಥಮಿಕ ಶಾಲೆಯಲ್ಲಿ ತಾಲೂಕು ಆಡಳಿತ ವತಿಯಿಂದ ಕಾಳಜಿ ಕೇಂದ್ರ ತೆರೆಯಲಾಗುವುದು ಎಂದು ತಹಶೀಲ್ದಾರ್ ತಿಳಿಸಿದ್ದಾರೆ.



















