ಕಾರ್ಕಳ : ಯಕೃತ್ (ಲಿವರ್) ಸಂಬಂಧಿತ ಕಾಯಿಲೆಗಳನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚುವ ಉದ್ದೇಶದಿಂದ ಕಾರ್ಕಳ ಡಾ. ಟಿ.ಎಂ.ಎ. ಪೈ ರೋಟರಿ ಆಸ್ಪತ್ರೆಯಲ್ಲಿ ಆ. 3 ರಿಂದ 5 ರವರೆಗೆ ಸಮಗ್ರ ಯಕೃತ್ ಆರೋಗ್ಯ ತಪಾಸಣಾ ಪ್ಯಾಕೇಜ್ ಅನ್ನು ಆಯೋಜಿಸಿದೆ.
3,300 ರೂ. ಮೌಲ್ಯದ ಈ ಪ್ಯಾಕೇಜ್‌ನಲ್ಲಿ ಅತ್ಯಾಧುನಿಕ ಫೈಬ್ರೋಸ್ಕ್ಯಾನ್ (FibroScan) ಆಗಿದ್ದು, ಸೂಜಿ ಇಲ್ಲದೆ, ನೋವಿಲ್ಲದೆ ಕೆಲವೇ ನಿಮಿಷಗಳಲ್ಲಿ ಯಕೃತ್‌ನ ಗಡಸುತನ (Liver Stiffness) ಹಾಗೂ ಫ್ಯಾಟಿ ಲಿವರ್ ಸಮಸ್ಯೆಯನ್ನು ಪತ್ತೆಹಚ್ಚುವಿಕೆ, ಅಲ್ಟ್ರಾಸೌಂಡ್, ರಕ್ತ ಪರೀಕ್ಷೆಗಳು, ಹೆಪಟೈಟಿಸ್ ಬಿ ಮತ್ತು ಸಿ ತಪಾಸಣೆ ಹಾಗೂ ಗ್ಯಾಸ್ಟ್ರೋಎಂಟರಾಲಜಿಸ್ಟ್ ಒಳಗೊಂಡಿದೆ.
ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಗ್ಯಾಸ್ಟ್ರೋಎಂಟರಾಲಜಿ ವಿಭಾಗದ ಪ್ರಾಧ್ಯಾಪಕರು ಹಾಗೂ ಉಪ ವೈದ್ಯಕೀಯ ಅಧೀಕ್ಷಕ ಡಾ. ಶಿರನ್ ಶೆಟ್ಟಿ ಅವರು, ಲಕ್ಷಣಗಳು ಕಾಣಿಸಿಕೊಳ್ಳುವ ಮೊದಲೇ ಫ್ಯಾಟಿ ಲಿವರ್ ಹಾಗೂ ಇತರ ಲಿವರ್ ಸಮಸ್ಯೆಗಳನ್ನು ಪತ್ತೆಹಚ್ಚಲು ಫೈಬ್ರೋಸ್ಕ್ಯಾನ್ ಅತ್ಯಂತ ಪರಿಣಾಮಕಾರಿ ಪರೀಕ್ಷೆಯಾಗಿದೆ ಎಂದು ಹೇಳಿದರು.

ಆಸ್ಪತ್ರೆಯ ಮುಖ್ಯ ಆಡಳಿತ ವೈದ್ಯಾಧಿಕಾರಿ ಡಾ. ಸಂಜಯ್ ಕುಮಾರ್ ಅವರು, ಸಮಯಕ್ಕೆ ಸರಿಯಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಭವಿಷ್ಯದ ಗಂಭೀರ ಲಿವರ್ ಸಮಸ್ಯೆಗಳನ್ನು ತಡೆಯುವ ಅತ್ಯುತ್ತಮ ಮಾರ್ಗವಾಗಿದೆ ಎಂದು ತಿಳಿಸಿದರು.
ಸೇವೆಯು ಅಪಾಯಿಂಟ್ಮೆನ್ ಆಧಾರದ ಮೇಲೆ ಲಭ್ಯವಿದ್ದು ಹೆಚ್ಚಿನ ಮಾಹಿತಿಗಾಗಿ: 97316 01150 / 08258-230583 ಸಂಪರ್ಕಿಸಬಹುದು.












