ಕಾರ್ಕಳ: ಬಸ್ ನಿಲ್ದಾಣದ ಸಮೀಪವಿರುವ ‘ಮಹಾಮ್ಮಾಯಿ ಮುಖ್ಯಪ್ರಾಣ ಎಂಟರ್ ಪ್ರೈಸಸ್’ ಅಂಗಡಿಯಲ್ಲಿ ಅಕ್ರಮವಾಗಿ ಮಟ್ಕಾ ದಂಧೆ ನಡೆಸುತ್ತಿದ್ದ ಮಿಯ್ಯಾರು ಗ್ರಾಮದ ವೀರೇಂದ್ರ ಶೆಟ್ಟಿ (42) ಹಾಗೂ ಪ್ರಮೋದ್ ಎಂಬಿಬ್ಬರನ್ನು ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ.
ಆ.1 ರಂದು ಆರೋಪಿಗಳು “1 ರೂಪಾಯಿಗೆ 70 ರೂಪಾಯಿ ನೀಡುವುದಾಗಿ” ಜನರಿಗೆ ಆಮಿಷ ಒಡ್ಡಿ ಮಟ್ಕಾ ಜುಗಾರಿ ಆಟಕ್ಕಾಗಿ ಹಣ ಸಂಗ್ರಹಿಸುತ್ತಿದ್ದರು. ಈ ಕುರಿತು ಬಂದ ಖಚಿತ ಮಾಹಿತಿ ಮೇರೆಗೆ ಕಾರ್ಕಳ ನಗರ ಠಾಣೆಯ ತನಿಖಾ ವಿಭಾಗದ ಎಸ್ ಐ ಶಿವಕುಮಾರ್ ಎಸ್. ಆರ್. ಹಾಗೂ ಸಿಬ್ಬಂದಿ ಸ್ಥಳಕ್ಕೆ ದಾಳಿ ನಡೆಸಿದ್ದಾರೆ.
ದಾಳಿಯ ವೇಳೆ ಮಟ್ಕಾ ಆಟಕ್ಕೆ ಬಳಸಿದ್ದ ₹1,415 ನಗದು, ಸಂಖ್ಯೆಗಳನ್ನು ಬರೆದಿದ್ದ ಚೀಟಿ, ಪೆನ್ನು ಹಾಗೂ ಮೊಬೈಲ್ ವಶಪಡಿಸಿಕೊಳ್ಳಲಾಗಿದೆ.
ಬಸ್ ನಿಲ್ದಾಣದ ಬಳಿ ಮಟ್ಕಾ ದಂಧೆ – ಇಬ್ಬರು ಆರೋಪಿಗಳ ಬಂಧನ



























