ಶಾಮಿಯಾನ ಸಂಯೋಜಕರ ಒಕ್ಕೂಟ

ಕಾರ್ಕಳ ವಲಯ ಅಧ್ಯಕ್ಷರಾಗಿ ಶಿವಾಜಿ ರಾವ್‌ – ಕಾರ್ಯದರ್ಶಿಯಾಗಿ ಪ್ರಸನ್ನ ಕುಮಾರ್

ಕಾರ್ಕಳ : ಶಾಮಿಯಾನ ಸಂಯೋಜಕರ ಒಕ್ಕೂಟ ಕಾರ್ಕಳ ವಲಯದ ನೂತನ ಅಧ್ಯಕ್ಷರಾಗಿ‌ ಜನನಿ ಎಂಟರ್‌ಪ್ರೈಸಸ್‌ ಮಾಲಕ ಕಾಬೆಟ್ಟು ಶಿವಾಜಿ ರಾವ್‌ ಹಾಗೂ ಕಾರ್ಯದರ್ಶಿಯಾಗಿ ಕುಕ್ಕುಂದೂರು ದರ್ಶನ್‌ ಎಂಟರ್‌ಪ್ರೈಸಸ್‌ ಮಾಲಕ ಪ್ರಸನ್ನ ಕುಮಾರ್ ಅವರು ಆಯ್ಕೆಯಾಗಿದ್ದಾರೆ. ಆ. 2ರಂದು ಕಾರ್ಕಳ ದೇವಾಡಿಗರ ಸಭಾಭವನದಲ್ಲಿ ಒಕ್ಕೂಟದ ಜಿಲ್ಲಾಧ್ಯಕ್ಷ ನಾರಾಯಣ ಖಾರ್ವಿ ಅವರ ಅಧ್ಯಕ್ಷತೆಯಲ್ಲಿ ನಡೆದ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.
ಉಪಾಧ್ಯಕ್ಷರಾಗಿ ಸಂತೋಷ ತಿರುಮಲ, ಯೋಗಿಶ್‌ ಕೋಟ್ಯಾನ್‌, ಗುರುಕಿರಣ್, ಉಪಕಾರ್ಯದರ್ಶಿಯಾಗಿ ಸುರೇಶ್‌ ದೇವಾಡಿಗ, ಕೋಶಾಧಿಕಾರಿಯಾಗಿ ನಿಧೀಶ್‌ ರಂಗನಪಲ್ಕೆ, ಸಂಘಟನಾ ಕಾರ್ಯದರ್ಶಿಯಾಗಿ ರಾಮಚಂದ್ರ ನಾಯಕ್‌ ಮುನಿಯಾಲು ಹಾಗೂ ಗೌರವ ಸಲಹೆಗಾರರಾಗಿ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾಗಿ 25 ಮಂದಿ ಸದಸ್ಯರುಗಳನ್ನು ಆಯ್ಕೆ ಮಾಡಲಾಯಿತು.























































error: Content is protected !!
Scroll to Top