ಕಾರ್ಕಳ : ಕೊರೊನಾ ನಿಯಂತ್ರಣದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕರೆ ನೀಡಿದ ೧೪ದಿನಗಳ ಬಂದ್ ಹಿನ್ನೆಲೆಯಲ್ಲಿ ಮಂಗಳವಾರ ಪೇಟೆ ತುಂಬಾ ಜನ ಸಂಚಾರ ಚುರುಕಾಗಿತ್ತು.
ಪೇಟೆಯ ದಿನಸಿ ಅಂಗಡಿ, ತರಕಾರಿ ಅಂಗಡಿ, ಹಣ್ಣು ಹಂಪಲುಗಳ ಅಂಗಡಿ, ಬಾರ್ನ ಎದುರು, ಬ್ಯಾಂಕ್ಗಳಲ್ಲಿ ಜನ ಸರದಿ ಸಾಲಿನಲ್ಲಿ ತುಂಬಿರುವುದು ಕಂಡು ಬಂತು. ಪಾರ್ಸೆಲ್ ನೀಡಲು ಕಷ್ಟ ಸಾಧ್ಯವಾದ ಹಿನ್ನೆಲೆಯಲ್ಲಿ ಹೆಚ್ಚಿನ ಹೊಟೇಲ್ಗಳು ತೆರೆದಿರಲಿಲ್ಲ. ಕಟ್ಟಡ ನಿರ್ಮಾಣದ ಅಂಗಡಿಗಳು, ವೈದ್ಯಕೀಯ ಸೇವಾಸಂಸ್ಥೆ, ಮೆಡಿಕಲ್ ಶಾಪ್ ತೆರೆದಿದ್ದವು. ವಾಹನ ಓಡಾಟವೂ ಸಾಕಷ್ಟಿತ್ತು. ಭಾರಿ ಸಂಖ್ಯೆಯ ಜನಸಂದಣಿಯ ಕಾರಣವಾಗಿ ಬಸ್ನಿಲ್ದಾಣ, ಪುರಸಭೆಯ ಎದುರು ಮತ್ತು ಮೂರು ಮಾರ್ಗಗಳಲ್ಲಿ ಟ್ರಾಫಿಕ್ ಜಾಮ್ ಕಂಡುಬಂತು.

ಚಿತ್ರ : ಸಂದೀಪ್ ತುಳ್ಸಿ















