ಕಾರ್ಕಳ : ಪ್ರಧಾನ ಮಂತ್ರಿಗಳ 15 ಅಂಶಗಳ ಕಾರ್ಯಕ್ರಮ ಅನುಷ್ಠಾನದ ಉಡುಪಿ ಜಿಲ್ಲಾ ಸ್ಥಾಯಿ ಸಮಿತಿಗೆ ಕಾರ್ಕಳ ದಾನಶಾಲೆ ನಿವಾಸಿ ನೇಮಿರಾಜ ಆರಿಗ ಆಯ್ಕೆಯಾಗಿದ್ದಾರೆ. ಕರ್ನಾಟಕ ಜೈನ್ ಪತ್ರಿಕೆಯ ಪ್ರಕಾಶಕರಾಗಿರುವ ನೇಮಿರಾಜ್ ಆರಿಗ ಅವರು ಬಾಹುಬಲಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷರಾಗಿ, ಕರ್ನಾಟಕ ಜೈನ್ ಸ್ವಯಂ ಸೇವಾ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷರಾಗಿ, ಉಡುಪಿ ಜಿಲ್ಲಾ ಸೌಹಾರ್ದ ಸಹಕಾರಿ ಒಕ್ಕೂಟ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಕಾರ್ಯಕ್ರಮ ಅನುಷ್ಠಾನ ಸ್ಥಾಯಿ ಸಮಿತಿಗೆ ನೇಮಿರಾಜ ಆರಿಗ ಆಯ್ಕೆ















