ಕಾರ್ಕಳ : ಕಾರ್ಕಳ ಹೆಬ್ರಿ ತಾಲೂಕಿನಾದ್ಯಂತ ಸೋಮವಾರ ಮತ್ತು ಮಂಗಳವಾರ ಗುಡುಗು ಸಹಿತ ಧಾರಾಕಾರ ಮಳೆಯಾಗಿದೆ. ಬೀಸಿದ ಗಾಳಿಗೆ ವಿವಿಧೆಡೆ ಹಾನಿಯುಂಟಾಗಿದೆ. ಹಲವಾರು ಮನೆಗೆ ತೊಂದರೆಯಾಗಿದ್ದು, ಅಡಿಕೆ ತೋಟಗಳು ಹಾನಿಗೀಡಾಗಿದೆ.
ಮಾಳ ಗ್ರಾಮದ ಸತೀಶ್ ಮನೆ ಹಾನಿಗೀಡಾಗಿದ್ದು, ಸುಮಾರು 1. 80 ಲಕ್ಷ ರೂ. ನಷ್ಟವುಂಟಾಗಿದೆ. ಮಾಳ ಪರಿಸರದ ಅನೇಕ ಕೃಷಿಕರ ಅಡಿಕೆ ಮರಗಳು ಧರೆಗುರುಳಿದೆ.

ಕೆರ್ವಾಶೆ ಗ್ರಾಮದಲ್ಲಿ ಬೀಸಿದ ಭಾರಿ ಗಾಳಿಗೆ 6 ಮನೆಗಳು ಭಾಗಶಃ ಹಾನಿಗೀಡಾಗಿದೆ. ಮಾಳ, ಕೆರ್ವಾಶೆ, ಬಜಗೋಳೆ, ಅಜೆಕಾರು ಭಾಗದಲ್ಲಿ ಭಾರಿ ಮಳೆಯಾಗಿದೆ. ಕಾರ್ಕಳ ಪೇಟೆಯಲ್ಲಿ ಸಾಧಾರಣ ಅಂದರೆ 4.2 ಮಿ.ಮೀ. ಮಳೆಯಾಗಿದೆ.














