ಮಗಳ ಮದುವೆಗೆ ಮೀಸಲಿಟ್ಟ 2 ಲಕ್ಷ ರೂ. ಹಣವನ್ನು ಆಕ್ಸಿಜನ್ ಖರೀದಿಗಾಗಿ ದೇಣಿಗೆ ನೀಡಿದ ರೈತ!

ನೀಮೂಚ್: ಕೊರೋನಾ ಸೋಂಕಿನ ಪ್ರಕರಣಗಳು ದಿನದಿಂದ ದಿನಕ್ಕೆ ಏರುತ್ತಿರುವ ಹಿನ್ನೆಲೆಯಲ್ಲಿ ಮಧ್ಯಪ್ರದೇಶದ ರೈತನೊಬ್ಬ ತನ್ನ ಮಗಳ ಅದ್ಧೂರಿ ಮದುವೆಗೆ ಕೂಡಿಟ್ಟ ಹಣವನ್ನು ಜೀವಸಂರಕ್ಷಕ ಆಮ್ಲಜನಕ ಖರೀದಿಸಲು ದಾನ ಮಾಡಿದ್ದಾರೆ.

ಗ್ವಾಲ್ ದೇವಿಯಾನ್ ಗ್ರಾಮದ ಚಂಪಲಾಲ್ ಗುರ್ಜಾರ್ 2 ಲಕ್ಷ ರೂ. ಮೌಲ್ಯದ ಚೆಕ್ ಅನ್ನು ಜಿಲ್ಲಾಧಿಕಾರಿ ಮಯಾಂಕ್ ಅಗರ್ ವಾಲ್ ಅವರಿಗೆ ನೀಡಿದ್ದಾರೆ.

ಎರಡು ಸಿಲಿಂಡರ್ ಖರೀದಿಸಿರುವ ಮಯಾಂಕ್ ಅಗರ್ ವಾಲ್ ಒಂದು ಸಿಲಿಂಡರ್ ಅನ್ನು ಜಿಲ್ಲಾಸ್ಪತ್ರೆಗೆ ಮತ್ತೊಂದನ್ನು ಜೀರನ್ ತೆಹ್ಸಿಲ್ ಆಸ್ಪತ್ರೆಗೆ ನೀಡಿದ್ದಾರೆ.

ಕೃಷಿಕರಾಗಿರುವ ಗುರ್ಜಾರ್ ತಮ್ಮ ಮಗಳನ್ನು ಬಹಳ ಆಸ್ಥೆಯಿಂದ ಬೆಳೆಸಿ, ಆಕೆಯನ್ನು ಅದ್ಧೂರಿಯಾಗಿ ಮದುವೆ ಮಾಡಲು ನಿರ್ಧರಿಸಿದ್ದರು, ಆದರೆ ಅಂತಿಮ ಕ್ಷಣದಲ್ಲಿ ತಮ್ಮ ನಿರ್ಧಾರವನ್ನು ಬದಲಿಸಿದ್ದಾರೆ, ಭಾನುವಾರ ನಡೆಯಬೇಕಿದ್ದ ಮಗಳ ಅದ್ಧೂರಿ ಮದುವೆಯನ್ನು ರದ್ಧುಗೊಳಿಸಿದ್ದಾರೆ.

ನನ್ನ ಮಗಳ ಮದುವೆಯನ್ನು ನೆನಪಿನಲ್ಲಿರಿಸಬೇಕು ಎಂಬ ಹಿನ್ನೆಲೆಯಲ್ಲಿ ಎರಡು ಆಕ್ಸಿಜನ್ ಸಿಲಿಂಡರ್ ಖರೀದಿಸಲು ನೀಡಿದ್ದಾಗಿ ಹೇಳಿದ್ದಾರೆ.





























































































































































































































error: Content is protected !!
Scroll to Top