ಆರೋಗ್ಯಧಾರ-ಕೋಕಂನ ಉಪಯೋಗಗಳು

ಪಶ್ಚಿಮ ಘಟ್ಟದಲ್ಲಿ ಹೇರಳವಾಗಿ ಬೆಳೆಯುವಂತಹ ಗಿಡ ಕೋಕಂ. ಆಯುರ್ವೇದದಲ್ಲಿ ವೃಕ್ಷಾಮ್ಲಾ ಎಂದು ಹೆಸರಿಸಲಾಗಿದೆ. ಕನ್ನಡದಲ್ಲಿ ಪುನರ್ಪುಳಿ ಎಂದು ಕರೆಯುತ್ತಾರೆ. ಕೋಕಂ ನೈಸರ್ಗಿಕ ಆಂಟಾಸಿಡ್ ಎಂದು ಹೇಳಬಹುದು. ಆರೋಗ್ಯಕ್ಕೆ ಉತ್ತಮವಾದದ್ದು. ಪುರಾತನ ಕಾಲದಲ್ಲಿ ಅಡುಗೆಗಳಲ್ಲಿ ಕೋಕಮ್ ಹಣ್ಣನ್ನು ಉಪಯೋಗಿಸುತ್ತಿದ್ದರು. ಹುಣಿಸೆಹಣ್ಣು ಪರಿಚಯವಾದ ಮೇಲೆ ಕೋಕಂ ಹಣ್ಣನ್ನು ಉಪಯೋಗಿಸುವುದು ಕ್ರಮೇಣ ಕಡಿಮೆಯಾಗುತ್ತಾಹೋಯಿತು. ಈ ಗಿಡದ ಹಣ್ಣು, ಎಲೆಗಳು ಹಾಗೂ ತೊಗಟೆಯನ್ನು ಉಪಯೋಗಿಸುತ್ತಾರೆ. ಮಾಗದ ಹಣ್ಣು ಹಸಿರು ಬಣ್ಣ ಹಾಗೂ ಮಾಗಿದ ಹಣ್ಣು ಕಡು ಕೆಂಪು ಬಣ್ಣವಿರುತ್ತದೆ.
ಬೊಟಾನಿಕಲ್ ನೇಮ್ – Garcinia Indica
ಇದು ಆಮ್ಲ ಮತ್ತು ಮಧುರ ರಸದಿಂದ ಕೂಡಿದೆ. ಸುಲಭವಾಗಿ ಜೀರ್ಣವಾಗುವಂಥದ್ದು ಹಾಗೂ ಪಿತ್ತದೋಷವನ್ನು ಕಡಿಮೆಗೊಳಿಸುತ್ತದೆ.

ಇದರ ಉಪಯೋಗಗಳು ಹೀಗಿವೆ
೧. ಇದು ದೇಹವನ್ನು ತಂಪುಗೊಳಿಸುವುದರಿಂದ ಬೇಸಿಗೆಯಲ್ಲಿ ಇದರ ಜ್ಯೂಸ್ನ ಸೇವನೆ ನಿರ್ಜಲೀಕರಣ ಹಾಗೂ ಸನ್ಸ್ಟ್ರೋಕ್ ಅನ್ನು ತಡೆಯಬಹುದಾಗಿದೆ.
೨. ಪಿತ್ತವನ್ನು ಸಮತೋಲನಗೊಳಿಸುತ್ತದೆ. ಬೇಸಿಗೆಯಲ್ಲಿ ಪಿತ್ತ ಉಲ್ಬಣಗೊಳ್ಳುವುದರಿಂದ ಇದರ ಜ್ಯೂಸ್ ಅಥವಾ ನೀರು ಸೇವಿಸಿದರೆ ಒಳ್ಳೆಯದು.
೩. ನಾಲಿಗೆಯ ರುಚಿಯನ್ನು ಹೆಚ್ಚಿಸುತ್ತದೆ. ಜೀರ್ಣಶಕ್ತಿಯನ್ನು ವೃದ್ಧಿಸುತ್ತದೆ, ಅತಿಸಾರ, ಮಲಬದ್ಧತೆ, ಅಲ್ಸರ್, ಅಜೀರ್ಣ, ಅಸಿಡಿಟಿ, ಪೈಲ್ಸ್ ಗಳಲ್ಲಿ ಉಪಯೋಗಿಸುತ್ತಾರೆ.
೪. ಇದು ಆ್ಯಂಟಿ ವೈರಲ್, ಆ್ಯಂಟಿ ಫಂಗಲ್ ಹಾಗೂ ಆ್ಯಂಟಿ ಬ್ಯಾಕ್ಟೀರಿಯಲ್ ಯಾಗಿ ಕಾರ್ಯನಿರ್ವಹಿಸುತ್ತದೆ. ಜ್ವರ ಹಾಗೂ ಅಲರ್ಜಿಯನ್ನು ಕಡಿಮೆಗೊಳಿಸುತ್ತದೆ. ತ್ವಚೆಯ ಅಲರ್ಜಿ ಇದ್ದಲ್ಲಿ ಕೋಕಂ ಪೇಸ್ಟ್ ಹಾಗೂ ಕೋಕಮ್ ಬೀಜದ ಎಣ್ಣೆಯನ್ನು ಉಪಯೋಗಿಸುತ್ತಾರೆ.
೫. ಹೃದಯಕ್ಕೆ, ಯಕೃತ್ತಿಗೆ ಹಿತಕರ. ಕೊಲೆಸ್ಟ್ರಾಲ್ ಹಾಗೂ ದೇಹದ ತೂಕವನ್ನು ಕಡಿಮೆಗೊಳಿಸುತ್ತದೆ.
೬. ವ್ಯಾಧಿಕ್ಷಮತ್ವವನ್ನು ಹೆಚ್ಚಿಸುತ್ತದೆ. ಆ್ಯಂಟಿ ಆಕ್ಸಿಡೆಂಟ್, ಆ್ಯಂಟಿ ಅಲ್ಸರ್ ಆಗಿ ಕಾರ್ಯ ನಿರ್ವಹಿಸುತ್ತದೆ.

ಹೀಗೆ ಉಪಯೋಗಿಸಿ
ಐದು ಒಣಗಿದ ಕೋಕಂ ಹಣ್ಣನ್ನು ಒಂದು ಗ್ಲಾಸ್‌ ನೀರಿನಲ್ಲಿ ರಾತ್ರಿ ನೆನೆಸಿ ಮರುದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಈ ನೀರನ್ನು ನಿತ್ಯವು ಸೇವಿಸಿ ಇದರ ಲಾಭ ಪಡೆಯಬಹುದು. ಕೋಕಂ ನೀರನ್ನು ದಿನದ ಯಾವುದೇ ವೇಳೆಯಲ್ಲಿ ಸೇವಿಸಿವುದರಿಂದ ಆ್ಯಸಿಡಿಟಿಯನ್ನು ದೂರ ಮಾಡಬಹುದು.

ಎಲೆಯನ್ನು ಉಪಯೋಗಿಸಿ ಚಟ್ನಿಯನ್ನು ಮಾಡಬಹುದು.
ಹಣ್ಣಿನ ಸಿಪ್ಪೆಯಿಂದ ರಸಂ, ಸಿರಪ್, ಜ್ಯೂಸ್ ಮಾಡಬಹುದು.
ಕೋಕಂ ಜ್ಯೂಸ್ನಗೆ ಜೇನುತುಪ್ಪ ಅಥವಾ ಶುಂಠಿ ಅಥವಾ ಬೆಲ್ಲ ಬೆರೆಸಿ ಸೇವಿಸಬಹುದು.
ಕೋಕಂ ಸೇವಿಸಿ ಆರೋಗ್ಯವನ್ನು ಉತ್ತಮಗೊಳಿಸಿ.

ಡಾ. ಹರ್ಷಾ ಕಾಮತ್, ಕಾರ್ಕಳ









































































































error: Content is protected !!
Scroll to Top