100ನೇ ಟೆಸ್ಟ್‌ ಪಂದ್ಯದಲ್ಲಿ ದ್ವಿಶತಕ ಸಿಡಿಸಿ ಇತಿಹಾಸ ಸೃಷ್ಟಿಸಿದ ಜೋ ರೂಟ್

ಚೆನ್ನೈ: ಚೆನ್ನೈನಲ್ಲಿ ಭಾರತದ ವಿರುದ್ಧದ ಮೊದಲ ಟೆಸ್ಟ್ ನಲ್ಲಿ ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ ಅಬ್ಬರ ಮುಂದುವರೆದಿದ್ದು, ತಮ್ಮ ಅಮೋಘ ಬ್ಯಾಟಿಂಗ್ ಮೂಲಕ ರೂಟ್ ಕ್ರಿಕೆಟ್ ಜಗತ್ತಿನ ಐತಿಹಾಸಿಕ ದಾಖಲೆ ಬರೆದಿದ್ದಾರೆ.

ಹೌದು.. ಭಾರತದ ವಿರುದ್ಧದ ಮೊದಲ ಟೆಸ್ಟ್ ನ ಮೊದಲ ಇನ್ನಿಂಗ್ಸ್ ನಲ್ಲಿ ದ್ವಿಶತಕ ಸಿಡಿಸಿರುವ ರೂಟ್ ಇಂಗ್ಲೆಂಡ್ ತಂಡದ ಬೃಹತ್ ಮೊತ್ತಕ್ಕೆ ಕಾರಣರಾಗಿದ್ದಾರೆ.  ರೂಟ್ 19 ಬೌಂಡರಿ ಮತ್ತು 2 ಸಿಕ್ಸರ್ ಗಳ ನೆರವಿನಿಂದ 217ರನ್ ಸಿಡಿಸಿದ್ದು, ಇದು ಜೋ ರೂಟ್ ಅವರ ಅಂತಾರಾಷ್ಟ್ರೀಯ ಟೆಸ್ಟ್ ವೃತ್ತಿ ಜೀವನದ ಐದನೇ ಟೆಸ್ಟ್ ದ್ವಿಶತಕವಾಗಿದ್ದು, ರೂಟ್ ಆಡಿದ ಕೊನೆಯ ಮೂರು ಪಂದ್ಯಗಳ ಪೈಕಿ 2ನೇ ದ್ವಿಶತಕವಾಗಿದೆ.

ಐತಿಹಾಸಿಕ ದಾಖಲೆ ಬರೆದ ರೂಟ್
ಚೆನ್ನೈ ಟೆಸ್ಟ್ ಇದು ಜೋ ರೂಟ್ ಗೆ 100 ಅಂತಾರಾಷ್ಟ್ರೀಯ ಟೆಸ್ಟ್ ಪಂದ್ಯವಾಗಿದೆ. 100ನೇ ಅಂತಾರಾಷ್ಟ್ರೀಯ ಪಂದ್ಯದಲ್ಲಿ ದ್ವಿಶತಕ ಸಿಡಿಸಿದ ವಿಶ್ವದ ಮೊದಲ ಮತ್ತು ಏಕೈಕ ಬ್ಯಾಟ್ಸಮನ್ ಎಂಬ ಕೀರ್ತಿಗೆ ರೂಟ್ ಪಾತ್ರರಾಗಿದ್ದಾರೆ.

ನದೀಂ ಬೌಲಿಂಗ್ ನಲ್ಲಿ ಎಲ್ ಬಿ ಬಲೆಗೆ ಬಿದ್ದ ರೂಟ್
ಇನ್ನು 218 ರನ್ ಗಳಿಸಿದ್ದ ರೂಟ್ ನದೀಂ ಬೌಲಿಂಗ್ ನಲ್ಲಿ ಎಲ್ ಬಿ ಬಲೆಗೆ ಬಿದ್ದರು. ಆ ಮೂಲಕ 2ನೇ ದಿನದಾಟಂದ ಅಂತಿಮ ಹಂತದಲ್ಲಿ ಭಾರತ ತಂಡ ಕೊಂಚ ನಿಟ್ಟಿಸಿರು ಬಿಡುವಂತಾಗಿದೆ. ಇತ್ತೀಚಿನ ವರದಿಗಳು ಬಂದಾಗ ಇಂಗ್ಲೆಂಡ್ ತಂಡ 6 ವಿಕೆಟ್ ನಷ್ಟಕ್ಕೆ 485 ರನ್ ಗಳಿಸಿದೆ. 





























































































































error: Content is protected !!
Scroll to Top