ಕಾರ್ಕಳ : ರೋಟರಿ ಆನ್ಸ್ ಕ್ಲಬ್ ಕಾರ್ಕಳ ಮತ್ತು ಯುವವಾಹಿನಿ ಘಟಕ ಕಾರ್ಕಳ ಆಶ್ರಯದಲ್ಲಿ ತೆಳ್ಳಾರು ಭಾಸ್ಕರ ಹೆಗ್ಡೆ ಅವರ ಮನೆಯಲ್ಲಿ ಡಿ. 20 ರಂದು ವಿಶ್ವ ರೈತರ ದಿನಾಚರಣೆಯ ಅಂಗವಾಗಿ ರೈತರೊಂದಿಗೆ ನಾವು ನಮ್ಮೊಂದಿಗೆ ರೈತರು ಕಾರ್ಯಕ್ರಮ ನಡೆಯಿತು.
ತಾಲೂಕು ರೈತ ಮೋರ್ಚಾ ಉಪಾಧ್ಯಕ್ಷ ಕೇಶವ ಮರಾಟೆ ಆಧುನಿಕ ಕೃಷಿ ಪದ್ಧತಿ ಕುರಿತು ಮಾಹಿತಿ ನೀಡಿದರು. ಮೋಹನ್ ಅಮಿನ್, ದೇವಕುಮಾರ್ ಅವರು ಪ್ರಾತ್ಯಕ್ಷಿಕತೆ ನಡೆಸಿಕೊಟ್ಟರು. ರೋಟರಿ ಆನ್ಸ್ ಸಂಸ್ಥೆಯ ಅಧ್ಯಕ್ಷೆ ರಮಿತಾ ಶೈಲೇಂದ್ರ ರಾವ್, ಯುವವಾಹಿನಿ ಘಟಕ ಅಧ್ಯಕ್ಷ ಗಣೇಶ್ ಸಾಲಿಯಾನ್ ಉಪಸ್ಥಿತರಿದ್ದರು.
ಸನ್ಮಾನ ಬಜಗೋಳಿ ಕ್ಷೇತ್ರದ ರೈತ ಮೋರ್ಚಾ ಅಧ್ಯಕ್ಷ ಭಾಸ್ಕರ್ ಹೆಗ್ಡೆ ದಂಪತಿ ಹಾಗೂ ಕಾರ್ಕಳ ತಾಲೂಕು ರೈತಮೋರ್ಚಾ ಉಪಾಧ್ಯಕ್ಷ ಕೇಶವ ಮರಾಟೆ ಅವರನ್ನು ಸನ್ಮಾನಿಸಲಾಯಿತು. ಮಾಡುವ ಮೂಲಕ ರೈತರಿಗೆ ಗೌರವವನ್ನು ಸಲ್ಲಿಸಲಾಯಿತು. ವೃಂದ ಶೆಟ್ಟಿ ಸ್ವಾಗತಿಸಿ, ಅರುಣ್ ನಿರೂಪಿಸಿ, ವಂದಿಸಿದರು.







































