18ನೇ ವರ್ಷಕ್ಕೆ ಪದಾರ್ಪಣೆಗೊಂಡ ಹೊಟೇಲ್‌ ಜೈನ್‌

ಬರಹ : ಕೊಂಡಳ್ಳಿ ಪ್ರಭಾಕರ್‌ ಶೆಟ್ಟಿ

ಕಾರ್ಕಳ : ಶುಚಿ ಮತ್ತು ರುಚಿಗೆ ಹೆಸರಾದ ಕಾರ್ಕಳ ಜಯಂತಿ ನಗರ ವೃತ್ತದ ಬಳಿಯಿರುವ ಹೊಟೇಲ್‌ ಜೈನ್‌ ಡಿ. 7ರಂದು 18ನೇ ವರ್ಷಕ್ಕೆ ಪದಾರ್ಪಣೆಗೊಂಡಿದೆ. ರುಚಿಕರವಾದ ಊಟ-ತಿಂಡಿ, ಹಿತಕರವಾದ ಆತಿಥ್ಯಕ್ಕೆ ಪ್ರಸಿದ್ಧಿ ಪಡೆದಿರುವ ಹೊಟೇಲ್‌ ಜೈನ್‌ ಕಾರ್ಕಳದಲ್ಲಿ ಗ್ರಾಹಕರ ಅಚ್ಚುಮೆಚ್ಚಿನ ಹೊಟೇಲ್‌ ಆಗಿ ಗುರುತಿಸಿಕೊಂಡಿದೆ. ಜೈನ್‌ ಶೈಲಿಯ ಊಟ, ನೀರ್ದೋಸೆ, ಗುಂಡ-ಜೈನ್‌ ಉಪ್ಪಿನಕಾಯಿ ಸವಿಯಲು ಎಲ್ಲೆಡೆಯಿಂದ ಗ್ರಾಹಕರು ಇಲ್ಲಿಗಾಗಮಿಸುತ್ತಾರೆ.

ಯಶಸ್ವಿ ಉದ್ಯಮ
ಶ್ರದ್ಧೆ, ಸತತ ಪರಿಶ್ರಮ, ವೃತ್ತಿ ಮೇಲೆ ಪ್ರೀತಿ, ಪ್ರಾಮಾಣಿಕತೆಯಿದ್ದಲ್ಲಿ ಯಶಸ್ಸು ಸಾಧ್ಯ ಎನ್ನುವುದನ್ನು ಸದ್ದಿಲ್ಲದೇ ಸಾಧಿಸಿ ತೋರಿದವರು ಜೈನ್‌ ಹೊಟೇಲ್‌ ಮಾಲಕ ಗುಣಪಾಲ್‌ ಜೈನ್‌. ಮೂಲತಃ ಮೂಡಬಿದ್ರಿ ಧರೆಗುಡ್ಡೆಯ ಗುಣಪಾಲ್‌ ಅವರು ತನ್ನ 14ನೇ ವಯಸ್ಸಿಗೆ ಉದ್ಯೋಗ ಅರಸಿಕೊಂಡು ಹೋಗಿದ್ದು ಮುಂಬೈಗೆ. ಅಲ್ಲಿ ಹೊಟೇಲ್‌ ಕಾರ್ಮಿಕನಾಗಿ ವೃತ್ತಿ ಜೀವನ ಆರಂಭಿಸಿದ ಅವರು 18 ವರ್ಷಗಳ ಕಾಲ ದುಡಿದರು. ಮುಂಬೈಯಿಂದ ಊರಿಗೆ ಮರಳಿದ ಗುಣಪಾಲ್‌ ಅವರು ವೇಣೂರಿನಲ್ಲಿ ಸಣ್ಣ ಕ್ಯಾಂಟೀನ್‌ ಆರಂಭಿಸಿದ್ದರು. ನಂತರ ಕಾರ್ಕಳದ ಬಸ್‌ ನಿಲ್ದಾಣ ಬಳಿ ಗಂಜಿ ಊಟ ಕ್ಯಾಂಟೀನ್‌ ತೆರೆದರು. ಕೆಲ ಸಮಯದ ಅನಂತರ ಕಾರ್ಕಳ ರೋಟರಿ ಆಸ್ಪತ್ರೆ ಎದುರುಗಡೆ ಬಾಡಿಗೆ ನೆಲೆಯಲ್ಲಿ ಜೈನ್‌ ರೆಸ್ಟೋರೆಂಟ್‌ ಆರಂಭಿಸಿದರು. 2012ರಲ್ಲಿ ಜಯಂತಿ ನಗರದಲ್ಲಿ ನಿವೇಶನ ಖರೀದಿಸಿ ಹೊಟೇಲ್‌ ಜೈನ್‌ಗೆ ಅಡಿಪಾಯ ಹಾಕಿದ ಗುಣಪಾಲ್‌ ಬಳಿಕ ಯಶಸ್ವಿ ಉದ್ಯಮಿಯಾಗಿ ಬೆಳೆದರು. ಹೊಟೇಲ್‌ನೊಂದಿಗೆ, ಬೇಕರಿ, ಜ್ಯೂಸ್‌ ಸೆಂಟರ್‌, ಕ್ಯಾಂಟರಿಂಗ್‌ ವ್ಯವಸ್ಥೆಯನ್ನು ಆರಂಭಿಸಿ, ಉದ್ಯಮ ವಿಸ್ತರಿಸಿದರು.

ಬಹಳ ಕಷ್ಟಪಟ್ಟು ಯಶಸ್ವಿ ಉದ್ಯಮಿಯಾದವರು ಗುಣಣ್ಣ. ಅವರ ಸರಳ, ಸಜ್ಜನಿಕೆ ಗುಣವೇ ಗ್ರಾಹಕರನ್ನು ಕೈಬೀಸಿ ಕರೆಯುವಂತಿದೆ. ಪ್ರೀತಿಯಿಂದ ಮಾತನಾಡಿಸುವ ಅವರು ಎಲ್ಲರೊಂದಿಗೆ ಆತ್ಮೀಯತೆಯಿಂದ ಬೆರೆಯುತ್ತಾರೆ.
ರಾಜೇಶ್‌ ರಾವ್‌
ಗುಣಪಾಲ್‌ ಅವರ ಗೆಳೆಯ

ವೇಣೂರಿನಲ್ಲಿ ಎರಡು ಹಲಗೆಯಿಟ್ಟು ಸಣ್ಣ ಕ್ಯಾಂಟಿನ್‌ನೊಂದಿಗೆ ಉದ್ಯಮಕ್ಕೆ ಅಡಿಯಿರಿಸಿದೆ. ಗ್ರಾಹಕರು ತೋರಿದ ಪ್ರೀತಿ, ವಿಶ್ವಾಸವೇ ನಾನಿಂದು ಹೊಟೇಲ್‌ ಉದ್ಯಮಿಯಾಗಿ ಗುರುತಿಸಿಕೊಳ್ಳುವಂತಾಯಿತು. ಗ್ರಾಹಕರು ನೀಡಿದ ಪ್ರೋತ್ಸಾಹ ಸದಾ ಸ್ಮರಣೀಯ.
ಗುಣಪಾಲ್‌ ಜೈನ್‌
ಮಾಲಕರು, ಹೊಟೇಲ್‌ ಜೈನ್‌

ಗುಣಪಾಲ್‌ ಜೈನ್‌








































































































error: Content is protected !!
Scroll to Top