ಹೆಬ್ರಿ ಗ್ರಾಮ ಅರಣ್ಯ ಸಮಿತಿ ವಾರ್ಷಿಕ ಮಹಾಸಭೆ

ಹೆಬ್ರಿ : ಗ್ರಾಮ ಅರಣ್ಯ ಸಮಿತಿಯ ಅಧ್ಯಕ್ಷನಾಗಿ ಕಳೆದ ೧೪ ವರ್ಷಗಳ ಸೇವೆ ತೃಪ್ತಿ ತಂದಿದೆ. ಈ ವೇಳೆ ಹೆಬ್ರಿ ಅರಣ್ಯ ಇಲಾಖೆಯ ಅಧಿಕಾರಿಗಳ ಸಹಕಾರ ಸ್ಮರಣೀಯವೆಂದು ಹೆಬ್ರಿ ಗ್ರಾಮ ಅರಣ್ಯ ಸಮಿತಿಯ ಅಧ್ಯಕ್ಷ ಎಚ್.‌ ಜಯಕರ ಪೂಜಾರಿ ಹೇಳಿದರು.
ಅವರು ಹೆಬ್ರಿ ಸಾಲು ಮರದ ತಿಮ್ಮಕ್ಕ ಟ್ರೀ ಪಾರ್ಕ್‌ನಲ್ಲಿ ನ. 28ರಂದು ನಡೆದ ಅರಣ್ಯ ಇಲಾಖೆಯ ಹೆಬ್ರಿ ಗ್ರಾಮ ಅರಣ್ಯ ಸಮಿತಿಯ ವಾರ್ಷಿಕ ಮಹಾಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಹೆಬ್ರಿಯ ಪ್ರಮುಖ ಅವಶ್ಯಕತೆಯಲ್ಲಿ ಒಂದಾದ ಹೆಬ್ರಿ ಉದ್ಯಾನವನದ ಕನಸು ೧೪ ವರ್ಷಗಳ ಬಳಿಕ ನನಸಾಗಿದೆ. ಉದ್ಯಾನವನ ನಿರ್ಮಣದಲ್ಲಿ ಸಹಕರಿಸಿದ ಎಲ್ಲ ಸ್ತರದ ಜನಪ್ರತಿನಿಧಿಗಳು, ಅರಣ್ಯ ಇಲಾಖೆಯವರು, ದಾನಿಗಳು ಹಾಗೂ ಬೆಂಬಲಿಸಿದ ಸ್ಥಳೀಯರ ಎಲ್ಲಿರಿಗೂ ಅಭಿನಂದನೆ ಸಲ್ಲಿಸುವುದಾಗಿ ಜಯಕರ ಪೂಜಾರಿ ಹೇಳಿದರು.
ಹೆಬ್ರಿ ವಲಯ ಅರಣ್ಯಾಧಿಕಾರಿ ಮಾರ್ಕಾಂಡೆಯ ಅಧ್ಯಕ್ಷತೆ ವಹಿಸಿದ್ದರು. ಆಗುಂಬೆ ಮಳೆಕಾಡು ಸಂಶೋಧನೆ ಕೇಂದ್ರದ ನಿರ್ದೇಶಕ ಅಜಯ್‌ಗಿರಿ, ಹೆಬ್ರಿ ಗ್ರಾಮ ಅರಣ್ಯ ಸಮಿತಿ ಕಾರ್ಯದರ್ಶಿ ಪ್ರಮೋದ್‌, ಸದಸ್ಯರಾದ ನಾರಾಯಣ ನಾಯ್ಕ್‌, ಜ್ಯೋತಿ ನಾಯ್ಕ್‌, ಸುರೇಶ ಶೆಟ್ಟಿ, ಶಾರದಾ, ರತ್ನಾಕರ ಆಚಾರ್ಯ, ಮಾಲತಿ, ಅಮರನಾಥ ಶೆಟ್ಟಿ, ಹರೀಶ್ಚಂದ್ರ ಹೆಗ್ಡೆ, ಸುಂದರಿ ಪೂಜಾರಿ, ನಯನ ಪ್ರಭು ಉಪಸ್ಥಿತರಿದ್ದರು. ಪಿ.ಸಿ. ದಿನೇಶ್‌ ಸ್ವಾಗತಿಸಿ, ಉಪ ವಲಯ ಅರಣ್ಯಾಧಿಕಾರಿ ಪ್ರಮೋದ್‌ ವರದಿ ವಾಚಿಸಿದರು. ಶ್ರೀಕಾಂತ್‌ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.











































error: Content is protected !!
Scroll to Top