ಕುಕ್ಕುಂದೂರು : ಯುವಕನ ಮೇಲೆ ಹಲ್ಲೆ-ಜೀವ ಬೆದರಿಕೆ

ಕಾರ್ಕಳ : ಪೈಪ್‌ ಅಳವಡಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಜಗಳಕ್ಕೆ ನಿಂತು ಮಗ ಚಂದನ್‌ ರಾವ್‌ ಗೆ ಮೂವರು ಕಲ್ಲಿನಿಂದ ಹಲ್ಲೆ ನಡೆಸಿರುತ್ತಾರೆ ಎಂದು ಕುಕ್ಕುಂದೂರು ಗ್ರಾಮದ ಜಯಂತಿ ನಗರ ನಿವಾಸಿ ಕೆ. ಭಾಸ್ಕರ ರಾವ್‌ ಅವರು ನ. 29ರಂದು ಕಾರ್ಕಳ ನಗರ ಪೊಲೀಸ್‌ ಠಾಣೆಗೆ ದೂರು ನೀಡಿರುತ್ತಾರೆ. ಜಯಂತಿ ನಗರ ಬಳಿ ಕೆ. ಪ್ರಭಾಕರ ರಾವ್‌ ಎಂಬವರ ಮನೆಯ ಟ್ಯಾಂಕ್‌ಗೆ ಪೈಪ್‌ ಜೋಡಿಸುವ ವಿಚಾರದಲ್ಲಿ ಜಗಳಕ್ಕಿಳಿದು ಕೆ. ಸತೀಶ್‌ ರಾವ್‌, ಪ್ರಕಾಶ್‌ ರಾವ್‌, ನಿಖಿಲ್‌ ರಾವ್‌ ಎಂಬವರು ಮಗ ಚಂದನ್‌ ರಾವ್‌ಗೆ ಕಲ್ಲಿನಿಂದ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ಬೈಯ್ದು, ಕೊಂದು ಹಾಕುವುದಾಗಿ ಬೆದರಿಕೆಯೊಡ್ಡಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.











































error: Content is protected !!
Scroll to Top