ಮಂಗಳೂರು ವಿಮಾನ ನಿಲ್ದಾಣದ ಹೆಸರನ್ನು ಕೋಟಿ- ಚೆನ್ನಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವೆಂದು ಬದಲಾಯಿಸಿದ ಮಿಥುನ್‌ ರೈ!

ಮಂಗಳೂರು, ನ.25: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತುಳುನಾಡಿನ ವೀರ ಪುರುಷರಾದ ಕೋಟಿ -ಚೆನ್ನಯರ ಹೆಸರಿಡಬೇಕೆಂಬ ಬೇಡಿಕೆ ತೀವ್ರವಾಗಿರುವ ಸಂದರ್ಭದಲ್ಲೇ ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್‌ ಅಧ್ಯಕ್ಷ ಮಿಥುನ್‌ ರೈ ಅವರು ಕೋಟಿ -ಚೆನ್ನಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸ್ವಾಗತ ಎಂಬ ಫ್ಲೆಕ್ಸ್‌ ಹಾಕಿದ್ದಾರೆ. ಅವರ ಈ ನಡೆ ಕುತೂಹಲ ಕೆರಳಿಸುವುದರ ಜೊತೆಗೆ ಚರ್ಚೆಗೂ ಕಾರಣವಾಗಿದೆ.
ಕೆಲವು ಸಂಘಟನೆಗಳು ವಿಮಾನ ನಿಲ್ದಾಣಕ್ಕೆ ಕೋಟಿ-ಚೆನ್ನಯರ ಹೆಸರಿಡಬೇಕೆಂಬ ಹೋರಾಟ ಪ್ರಾರಂಭಿಸಿವೆ. ಇದೀಗ ಮಿಥುನ್‌ ರೈಯವರು ಈ ಹೋರಾಟಕ್ಕೆ ಈ ಫ್ಲೆಕ್ಸ್‌ ಅಳವಡಿಸುವ ಮೂಲಕ ಬೆಂಬಲ ವ್ಯಕ್ತಪಡಿಸಿದ್ದಾರೆ.
ವಿಮಾನ ನಿಲ್ದಾಣಕ್ಕೆ ಹೋಗುವ ದಾರಿಯಲ್ಲಿ ಕೆಂಜಾರು ಸಮೀಪ ಹಾಕಿರುವ ಈ ಫ್ಲೆಕ್ಸ್‌ನಲ್ಲಿ “ಸುಸ್ವಾಗತ ಕೋಟಿ-ಚೆನ್ನಯ ಅಂತರ್‌ ರಾಷ್ಟ್ರೀಯ ವಿಮಾನ ನಿಲ್ದಾಣ” ಎಂದು ಬರೆಯಲಾಗಿದೆ. ಬದಿಯಲ್ಲಿ ಕೋಟಿ-ಚೆನ್ನಯರ ಚಿತ್ರ ಮತ್ತು ಕೆಳಗೆ ಮಿಥುನ್‌ ರೈಯವರ ಚಿತ್ರವನ್ನು ಹಾಕಿಕೊಳ್ಳಲಾಗಿದೆ.
ಇತ್ತೀಚೆಗೆ ಮಂಗಳೂರು ವಿಮಾನ ನಿಲ್ದಾಣದ ನಿರ್ವಹಣೆಯ ಜವಾಬ್ದಾರಿಯನ್ನು 50 ವರ್ಷ ಕಾಲ ಅದಾನಿ ಕಂಪೆನಿಗೆ ವಹಿಸಲಾಗಿದೆ. ಅದಾನಿ ಕಂಪೆನಿ ವಿಮಾನ ನಿಲ್ದಾಣದಲ್ಲಿ ತನ್ನ ಹೆಸರು ಹಾಕಿಕೊಂಡ ಬಳಿಕ ಕೋಟಿ-ಚೆನ್ನಯರ ಹಾಗೂ ಇತರ ಐತಿಹಾಸಿಕ, ರಾಜಕೀಯ ವ್ಯಕ್ತಿಗಳ ಹೆಸರಿಡಬೇಕೆಂಬ ಬೇಡಿಕೆಗಳು ತೀವ್ರಗೊಂಡಿವೆ.







































































error: Content is protected !!
Scroll to Top