ಕ್ರಿಕೆಟ್ ಕಿಂಡಿ: ಮ್ಯಾಚ್ ಸೋತಿತು; ಕ್ರಿಕೆಟ್ ಗೆದ್ದಿತು

1980ರ ಫೆಬ್ರವರಿ ತಿಂಗಳು. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಸುವರ್ಣ ಮಹೋತ್ಸವ ವರ್ಷ. ಅದನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಲು ಬೋರ್ಡ್ ನಿರ್ಧಾರ ಮಾಡಿತು. ಭಾರತ ಮತ್ತು ಇಂಗ್ಲೆಂಡ್ ನಡುವೆ ಟೆಸ್ಟ್ ಪಂದ್ಯವನ್ನು ಏರ್ಪಡಿಸಲಾಯಿತು. ಖ್ಯಾತ ಬ್ಯಾಟ್ಸ್‌ ಮ್ಯಾನ್ ಜಿ. ಆರ್. ವಿಶ್ವನಾಥ್ ಅವರು ಭಾರತ ತಂಡದ ಕ್ಯಾಪ್ಟನ್ ಆಗಿ ಆಯ್ಕೆ ಆದರು. ಮೊದಲು ಬ್ಯಾಟಿಂಗ್ ಮಾಡಿದ ಭಾರತ ಕಡಿಮೆ ರನ್ನುಗಳಿಗೆ ಆಲೌಟ್ ಆಯಿತು. ನಂತರ ಬ್ಯಾಟ್ ಮಾಡಲು ಇಳಿದ ಇಂಗ್ಲೆಂಡ್ ಅದೇ ರೀತಿ ಕುಸಿತಕ್ಕೆ ಒಳಗಾಯಿತು. 85/6 ಇದು ಇಂಗ್ಲೆಂಡಿನ ಸ್ಥಿತಿ. ಆಗ ಜೊತೆಗೂಡಿದವರು ಬಾಬ್ ಟೇಲರ್ ಮತ್ತು ಇಯಾನ್ ಬೋತಂ. ಆಗ ಬೌಲರ್ ಎಸೆದ ಒಂದು ಬಾಲ್ ಬಾಬ್ ಟೇಲರ್ ಬ್ಯಾಟಿನ ಬುಡದಲ್ಲಿ ಬೌನ್ಸ್ ಆಗಿ ವಿಕೆಟ್ ಕೀಪರ್ ಕಿರ್ಮಾನಿ ಗ್ಲೌಸ್ ಸೇರಿತು. ಬಲವಾದ ಅಪೀಲ್ ಬಂದ ಕೂಡಲೇ ಅಂಪಾಯರ್ ಹನುಮಂತ ರಾವ್ ಅವರ ಬೆರಳು ಮೇಲೆ ಹೋಯಿತು. ಅದು ಥರ್ಡ್ ಅಂಪಾಯರ್ ಕಾಲ ಅಲ್ಲ. ಅಂಪಾಯರ್ ಔಟ್ ಕೊಟ್ಟ ಮೇಲೆ ಬ್ಯಾಟ್ಸ್‌ ಮ್ಯಾನ್ ಕ್ರೀಸಿನಲ್ಲಿ ನಿಲ್ಲುವ ಹಾಗೆ ಇರಲಿಲ್ಲ. ಹಾಗೆ ಬಾಬ್ ಟೇಲರ್ ತಲೆ ತಗ್ಗಿಸಿ ಮೆಲ್ಲನೆ ಪೆವಿಲಿಯನ್ ಕಡೆಗೆ ಹೆಜ್ಜೆ ಹಾಕುತ್ತಿದ್ದರು. ಆಗ ಸ್ಲಿಪ್ ವಿಭಾಗದಲ್ಲಿ ಫೀಲ್ಡ್ ಮಾಡುತ್ತಿದ್ದ ಕ್ಯಾಪ್ಟನ್ ವಿಶ್ವನಾಥ್ ನೇರವಾಗಿ ಅಂಪಾಯರ್ ಹತ್ತಿರ ಹೋಗಿ ಬ್ಯಾಟ್ಸ್‌ ಮ್ಯಾನ್ ಔಟ್ ಆಗಿಲ್ಲ, ಬಾಲ್ ಬ್ಯಾಟಿಗೆ ತಾಗಿಲ್ಲ ಎಂದು ಮನವರಿಕೆ ಮಾಡಿದರು. ಅಂಪಾಯರ್ ತಮ್ಮ ತೀರ್ಮಾನವನ್ನು ಹಿಂದೆ ಪಡೆದು ಬಾಬ್ ಟೇಲರನನ್ನು ಹಿಂದೆ ಕರೆದು ಬ್ಯಾಟಿಂಗ್ ಮುಂದುವರಿಸಲು ಹೇಳಿದರು. ನಂತರ ಟೇಲರ್ ಬಾಥಮ್ ಜೋಡಿ ಅಜೆಯವಾಗಿ ಮುಂದುವರೆದು ಬೋತಮ್ ಶತಕ ಹೊಡೆದರು. ಭಾರತ ಆ ಪಂದ್ಯ ಸೋತಿತು. ಅದಕ್ಕೆ ವಿಶ್ವನಾಥ್ ಕಾರಣ ಎಂದು ಜನರು ಬೈಗುಳ ಸುರಿದರು. ಮಾಧ್ಯಮಗಳು ಖಂಡಿಸಿ ಬರೆದವು. ಆದರೆ ವಿಶ್ವನಾಥ್ ಅವರ ಕ್ರೀಡಾ ಮನೋಭಾವವು ಭಾರೀ ಮೆಚ್ಚುಗೆ ಪಡೆಯಿತು. ಭಾರತ ಟೆಸ್ಟ್ ಪಂದ್ಯ ಸೋತಿತು, ಆದರೆ ಕ್ರಿಕೆಟ್ ಗೆದ್ದಿತ್ತು!
ಫೋರ್ತ್‌ ಅಂಪಾಯರ್‌









































































































error: Content is protected !!
Scroll to Top