Wednesday, October 27, 2021
spot_img
Homeಸಾಹಿತ್ಯ/ಸಂಸ್ಕೃತಿಬಹುಮುಖ ಪ್ರತಿಭೆಯ ಹಸ್ನಾ ಝುಮನ್

ಬಹುಮುಖ ಪ್ರತಿಭೆಯ ಹಸ್ನಾ ಝುಮನ್

ಹಸ್ನಾ ಝುಮನ್ ಬೈಲೂರಿನ ಬಿ. ಮಹಮ್ಮದ್ ಹ್ಯಾರಿಸ್ ಹಾಗೂ ಜಬೀನಾ ದಂಪತಿಯ ಪುತ್ರಿ.
ಪ್ರಸ್ತುತ ಶ್ರೀ ಭುವನೇಂದ್ರ ವಿದ್ಯಾಶಾಲೆಯ ಆರನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ.
‘ಆಡು ಮುಟ್ಟದ ಸೊಪ್ಪಿಲ್ಲ’ ಎಂಬ ಗಾದೆ ಮಾತಿಗೆ ನಿದರ್ಶನವೆಂಬಂತೆ ಹಸ್ನಾ ಝುಮನ್ ಎಂಬ ಪ್ರತಿಭೆ ತನ್ನ ಪ್ರತಿಭೆಯ ಛಾಪು ಮೂಡಿಸದ ಕ್ಷೇತ್ರವಿಲ್ಲ. ಸದಾ ಕ್ರಿಯಾಶೀಲ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರ ಮೂಲಕ ಹಲವಾರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾಳೆ.

ಈಕೆ ಚಿತ್ರಕಲೆಯಲ್ಲಿ ವಿಶೇಷ ಆಸಕ್ತಿಯನ್ನು ಹೊಂದಿದ್ದು ನೃತ್ಯ, ಸಂಗೀತ, ಕರಕುಶಲ ವಸ್ತುಗಳ ತಯಾರಿಕೆ, ಈಜು ಅಷ್ಟೇ ಅಲ್ಲದೆ ಆಟೋಟ ಸ್ಪರ್ಧೆಗಳಲ್ಲೂ ಸೈ ಎನಿಸಿಕೊಂಡು ಕಲಿಕೆಯಲ್ಲೂ ಸದಾ ಮುಂದಿದ್ದಾಳೆ.
ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಉಡುಪಿ ಇವರು ಆಯೋಜಿಸಿರುವ ಅಬ್ದುಲ್ ಕಲಾಂ ಆಜಾದ್ ಎಂಬ ವಿಷಯದಲ್ಲಿ ಬರೆದ ಪ್ರಬಂಧಕ್ಕೆ ದ್ವಿತೀಯ ಸ್ಥಾನ ಪಡೆದಿರುತ್ತಾಳೆ. ಪ್ರತಿವರ್ಷವೂ ಶಿಕ್ಷಣ ಇಲಾಖೆಯು ಏರ್ಪಡಿಸುವ ಪ್ರತಿಭಾ ಕಾರಂಜಿ ಸ್ಪರ್ಧೆಗಳಲ್ಲಿ ಭಾಗವಹಿಸಿ ಉರ್ದು ಕಂಠಪಾಠದಲ್ಲಿ ಪ್ರಥಮ ಹಾಗೂ ಧಾರ್ಮಿಕ ಪಠಣದಲ್ಲಿ ದ್ವಿತೀಯ ಸ್ಥಾನವನ್ನು ಜಿಲ್ಲಾಮಟ್ಟದಲ್ಲಿ ಗಳಿಸಿರುತ್ತಾಳೆ.ಶ್ರೀ ಭುವನೇಂದ್ರ ವಿದ್ಯಾಶಾಲೆಯಲ್ಲಿ ಪ್ರತಿವರ್ಷವೂ ಭಾಷಣ,ಪ್ರಬಂಧ,ಚಿತ್ರಕಲೆ ಸಂಗೀತ ಸ್ಪರ್ಧೆಗಳಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನಗಳನ್ನು ತನ್ನದಾಗಿಸಿಕೊಂಡಿದ್ದಾಳೆ.
ಸ್ಪೆಲ್ ಬಿ ಪರೀಕ್ಷೆಯಲ್ಲಿ ರಾಜ್ಯ ಮಟ್ಟದ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿರುವ ಈಕೆ ಆನೆಕೆರೆ ಪಾರ್ಕ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಆಯೋಜಿಸಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ ಪ್ರಥಮ, ಕೇಂದ್ರ ಗ್ರಂಥಾಲಯ ಇವರು ಆಯೋಜಿಸಿರುವ ಚಿತ್ರಕಲೆ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನವನ್ನು ತನ್ನದಾಗಿಸಿಕೊಂಡಿದ್ದಾಳೆ. ಬೈಲೂರಿನ ಮಸೀದಿಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ಹಲವಾರು ಸ್ಪರ್ಧೆಗಳಲ್ಲಿ ಭಾಗವಹಿಸಿ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಹಾಗೂ ಸಂಗೀತ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನವನ್ನು ಗಳಿಸಿರುತ್ತಾಳೆ.
ಜೇಸಿ ಸಂಸ್ಥೆಯವರು 2018 ರಲ್ಲಿ ಆಯೋಜಿಸಿರುವ ಚಿತ್ರಕಲಾ ಸ್ಪರ್ಧೆಯಲ್ಲಿ ದ್ವಿತೀಯ ಹಾಗೂ 2019 ರಲ್ಲಿ ಪ್ರಥಮ ಬಹುಮಾನ ಪಡೆದು ತನ್ನ ವಿದ್ಯಾಸಂಸ್ಥೆ ಗೆ ಹೆಮ್ಮೆ ತಂದಿದ್ದಾಳೆ.
ಗೀತಾಜಯಂತಿ ಪ್ರಯುಕ್ತ ಏರ್ಪಡಿಸುವ ಗೀತಾಕಂಠಪಾಠ ಸ್ಪರ್ಧೆಯಲ್ಲಿ ಭಾಗವಹಿಸಿ ಅತ್ತುತ್ತಮ ಪ್ರದರ್ಶನವನ್ನು ನೀಡಿರುವ ಈಕೆಯ ಸಾಧನೆ ನಿಜಕ್ಕೂ ಪ್ರಸಂಶನೀಯ.
ಸಂಧ್ಯಾ ಹೆಗ್ಡೆ
ಶ್ರೀ ಭುವನೇಂದ್ರ ವಿದ್ಯಾಶಾಲಾ ಕಾರ್ಕಳ.(ಪೆನ್‌ ಟೀಮ್‌ ಸದಸ್ಯೆ)

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!