Tuesday, September 28, 2021
spot_img
Homeಕ್ರೈಂಉಗ್ರ ನಂಟು ಶಂಕೆ : ಶಿರಸಿಯ ಯುವಕನನ್ನು ಬಂಧಿಸಿದ ಎನ್‌ಐಎ

ಉಗ್ರ ನಂಟು ಶಂಕೆ : ಶಿರಸಿಯ ಯುವಕನನ್ನು ಬಂಧಿಸಿದ ಎನ್‌ಐಎ

ಶಿರಸಿ, ನ.11 : ಉಗ್ರಗಾಮಿ ಸಂಘಟನೆ‌ ಜೊತೆ ನಂಟು ಹೊಂದಿರುವ ಶಂಕೆಯಲ್ಲಿ ಶಿರಸಿಯ ಯುವಕನನ್ನು ರಾಷ್ಟ್ರೀಯ ತನಿಖಾ ಪಡೆಯ ಅಧಿಕಾರಿಗಳು ಬಂಧಿಸಿ ವಿಚಾರಣೆಗಾಗಿ ಕರೆದೊಯ್ದಿದ್ದಾರೆ.
ಶಿರಸಿಯ ಅರೆಕೊಪ್ಪ ಎಂಬಲ್ಲಿನ ಸಯ್ಯದ್ ಇದ್ರೀಸ್ ಸಬಿ ಸಾಬ ಮುನ್ನಾ (25) ಉಗ್ರ‌ರ ನಂಟು ಹೊಂದಿರುವ ಅನುಮಾನದಲ್ಲಿ ಸೆರೆಯಾಗಿರುವ ಯುವಕ. ಈ ಹಿಂದೆಯೂ ಈತ ಮೂರು ಸಲ ಈ ಮಾದರಿಯ ಆರೋಪದಡಿ ಸೆರೆಯಾಗಿ ವಿಚಾರಣೆ ಎದುರಿಸಿದ್ದ.
ನಿನ್ನೆ ರಾತ್ರಿ ಅರೆಕೊಪ್ಪಕ್ಕೆ ಆಗಮಿಸಿದ್ದ ಎನ್‌ಐಎ ತಂಡ ಆರೋಪಿಯನ್ನು ವಶಕ್ಕೆ ಪಡೆದುಕೊಂಡಿತ್ತು. ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಿ ಆ ಬಳಿಕ ವಿಚಾರಣೆಗಾಗಿ ಇಂದು ಪಶ್ಚಿಮ ಬಂಗಾಳ‌ಕ್ಕೆ ಕರೆದೊಯ್ದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪಶ್ಚಿಮ ಬಂಗಾಳದ ಎನ್‌ಐಎ ವಿಭಾಗ ಈ ಕಾರ್ಯಾಚರಣೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!