Sunday, September 26, 2021
spot_img
Homeದೇಶಆಧುನಿಕ ದಾನಶೂರ ಕರ್ಣ ಅಜೀಂ ಪ್ರೇಮ್‌ಜಿ

ಆಧುನಿಕ ದಾನಶೂರ ಕರ್ಣ ಅಜೀಂ ಪ್ರೇಮ್‌ಜಿ

ಬೆಂಗಳೂರು, ನ.11: ವಿಪ್ರೊ ಸಂಸ್ಥಾಪಕ ಅಜೀಂ ಪ್ರೇಮ್‌ಜಿಯವರನ್ನು ನಾವು ನಿಸ್ಸಂಶಯವಾಗಿಯೂ ಭಾರತದ ದಾನಶೂರ ಕರ್ಣ ಎಂದು ಕರೆಯಬಹುದು. ಅವರು 2020ರಲ್ಲಿ ನಿತ್ಯ ದಾನ ಮಾಡಿದ ಮೊತ್ತವಷ್ಟು ಗೊತ್ತೇ? ಬರೋಬ್ಬರಿ 22 ಕೋಟಿ ರೂಪಾಯಿ. ಈ ವರ್ಷವೊಂದರಲ್ಲೇ ಅವರು ಹೀಗೆ 7,904 ಕೋ. ರೂ. ದಾನ ಮಾಡಿದ್ದಾರಂತೆ.
ಎಡೆಲ್ಗಿ ವ್ ಹರುನ್‌ ಇಂಡಿಯಾ ಫಿಲಾಂತ್ರಫಿ ಲಿಸ್ಟ್‌ -2020 ಭಾರತದ ಅಗ್ರ ದಾನಿಗಳ ಪಟ್ಟಿಯೊಂದನ್ನು ತಯಾರಿಸಿದ್ದು, ಅದರಲ್ಲಿ ಅಜೀಂ ಪ್ರೇಮ್‌ ಜಿ ಅಗ್ರಸ್ಥಾನದಲ್ಲಿದ್ದಾರೆ.
ಅಜೀಂ ಪ್ರೇಮ್‌ಜಿ ಫೌಂಡೇಶನ್‌, ವಿಪ್ರೊ ಮತ್ತು ವಿಪ್ರೊ ಎಂಟರ್‌ ಪ್ರೈಸಸ್‌ ಕಳೆದ ಎಪ್ರಿಲ್‌ ನಲ್ಲಿ ಕೊರೊನಾ ಹಾವಳಿಯನ್ನು ತಡೆಗಟ್ಟಲೆಂದೇ 1,125 ಕೋ. ರೂ. ದೇಣಿಗೆ ನೀಡಿದ್ದವು. ಇದು ವಿಪ್ರೊ ವಾರ್ಷಿಕವಾಗಿ ನೀಡುವ ದೇಣಿಗೆಗಳು ಮತ್ತು ಇತರ ನೆರವುಗಳಿಗೆ ಹೊರತಾದ ಮೊತ್ತ.
ಎಚ್‌ಸಿಎಲ್ ಸಂಸ್ಥೆಯ ಶಿವ ನಾಡಾರ್‌ ದಾನಿಗಳ ಯಾದಿಯಲ್ಲಿ ದ್ವಿತೀಯ ಸ್ಥಾನದಲ್ಲಿದ್ದಾರೆ. ಅವರು 795 ಕೋ.ರೂ. ದಾನ ಮಾಡಿದ್ದಾರೆ. ಶ್ರೀಮಂತಿಕೆಯಲ್ಲಿ ಅಗ್ರಸ್ಥಾನದಲ್ಲಿರುವ ರಿಲಯನ್ಸ್‌ ಸಂಸ್ಥೆಯ ಮುಕೇಶ್‌ ಅಂಬಾನಿ 458 ಕೋ.ರೂ. ದಾನ ಮಾಡಿ ಮೂರನೇ ಸ್ಥಾನದಲ್ಲಿದ್ದಾರೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!