Tuesday, September 28, 2021
spot_img
Homeದೇಶಸುಪ್ರೀಂ ಕೋರ್ಟಿನಲ್ಲಿ ಅರ್ನಬ್‌ ಗೋಸ್ವಾಮಿಗೆ ಜಾಮೀನು

ಸುಪ್ರೀಂ ಕೋರ್ಟಿನಲ್ಲಿ ಅರ್ನಬ್‌ ಗೋಸ್ವಾಮಿಗೆ ಜಾಮೀನು

ದಿಲ್ಲಿ, ನ.11: ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಸೆರೆಯಾಗಿರುವ ರಿಪಬ್ಲಿಕ್‌ ಟಿವಿ ಮುಖ್ಯ ಸಂಪಾದಕ ಅರ್ನಬ್‌ ಗೋಸ್ವಾಮಿಗೆ ಸುಪ್ರೀಂ ಕೋರ್ಟ್‌ ಮಧ್ಯಂತರ ಜಾಮೀನು ನೀಡಿದೆ.
ನ್ಯಾ. ಡಿ. ವೈ. ಚಂದ್ರಚೂಡ ಮತ್ತು ನ್ಯಾ. ಇಂದಿರಾ ಬ್ಯಾನರ್ಜಿ ಅವರ ರಜಾ ಪೀಠ ಅರ್ನಬ್‌ ಗೋಸ್ವಾಮಿ ಹಾಗೂ ಇನ್ನಿಬ್ಬರ ಜಾಮೀನು ಅರ್ಜಿಯನ್ನು ವಿಚಾರಣೆ ನಡೆಸಿತು. ಈ ಸಂದರ್ಭದಲ್ಲಿ ಮಹಾರಾಷ್ಟ್ರ ಸರಕಾರದ ವಿರುದ್ಧ ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿದೆ. ಜಾಮೀನು ನಿರಾಕರಿಸಿದ ಬಾಂಬೆ ಹೈಕೋರ್ಟಿನ ತೀರ್ಪಿನ ಕುರಿತು ಕೂಡ ನ್ಯಾಯಪೀಠ ಕಿಡಿ ಕಾರಿದೆ. ಜಾಮೀನು ನಿರಾಕರಿಸಿರುವುದು ವೈಯಕ್ತಿಕ ಸ್ವಾತಂತ್ರ್ಯದ ಮೇಲಾಗಿರುವ ಆಕ್ರಮಣ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
50,000 ರೂ. ಮುಚ್ಚಳಿಕೆ ಆಧಾರದಲ್ಲಿ ಅರ್ನಬ್‌ಗೆ ಜಾಮೀನು ನೀಡಲಾಗಿದೆ. ತನ್ನ ಆದೇಶವನ್ನು ತಕ್ಷಣ ಪಾಲಿಸಬೇಕೆಂದು ಮುಂಬಯಿಯ ಪೊಲೀಸ್‌ ಕಮಿಷನರ್‌ಗೆ ಸುಪ್ರೀಂ ಕೋರ್ಟ್‌ ಆದೇಶಿಸಿದೆ.
ಈ ಪ್ರಕರಣದಲ್ಲಿ ನಾವು ಹಸ್ತಕ್ಷೇಪ ಮಾಡದಿದ್ದರೆ ನಮ್ಮ ವಿನಾಶವನ್ನು ನಾವೇ ಆಹ್ವಾನಿಸಿಕೊಂಡಂತೆ. ನಾವು ರಿಪಬ್ಲಿಕ್‌ ಚಾನೆಲ್‌ ವೀಕ್ಷಿಸುವುದಿಲ್ಲ. ಆದರೆ ಸೈದ್ಧಾಂತಿಕ ಭಿನ್ನಾಭಿಪ್ರಾಯವನ್ನು ನಿಭಾಯಿಸುವ ಸರಿಯಾದ ರೀತಿ ಇದಲ್ಲ ಎಂದು ನ್ಯಾಯಾಲಯ ಮಹಾರಾಷ್ಟ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದೆ.
ಅರ್ನಬ್‌ ಗೋಸ್ವಾಮಿಯನ್ನು ಮಹಾರಾಷ್ಟ್ರ ಪೊಲೀಸರು ಎರಡು ವರ್ಷ ಸಂಭವಿಸಿದ ಇಬ್ಬರ ಆತ್ಮಹತ್ಯೆಗೆ ಸಂಬಂಧಿಸಿ ಬಂಧಿಸಿ ತಲೋಜಾ ಜೈಲಿನಲ್ಲಿಟ್ಟಿತ್ತು. ಕೆಳಗಿನ ನ್ಯಾಯಾಲಯ ಮತ್ತು ಬಾಂಬೆ ಹೈಕೋರ್ಟ್‌ ಅವರಿಗೆ ಜಾಮೀನು ನಿರಾಕರಿಸಿತ್ತು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!