Wednesday, August 17, 2022
spot_img
Homeಜಿಲ್ಲಾಕಂಬಳದ ಮೇಲೂ ಕೊರೊನಾ ಕರಿ ನೆರಳು

ಕಂಬಳದ ಮೇಲೂ ಕೊರೊನಾ ಕರಿ ನೆರಳು


ಕಾರ್ಕಳ, ನ. 6: ಕನಿಷ್ಠ ಕಂಬಳದ ಸೀಸನ್‌ ಪ್ರಾರಂಭವಾಗಲಾದರೂ ಕೊರೊನಾ ಹಾವಳಿ ಕಡಿಮೆ ಆಗಬಹುದು ಎಂಬ ನಿರೀಕ್ಷೆ ಹುಸಿಯಾಗಿದೆ. ವೈರಸ್‌ ಪ್ರಸರಣ ತುಸು ಇಳಿಮುಖವಾಗಿದ್ದರೂ ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ. ಹೀಗಾಗಿ ಈ ಸಲ ಹಗಲು – ರಾತ್ರಿ ಕಂಬಳ ನಡೆಯುವ ಸಾಧ್ಯತೆ ಕಡಿಮೆ.ಈ ಮಾಸಾಂತ್ಯದಲ್ಲಿ ಕಂಬಳ ಸೀಸನ್‌ ಪ್ರಾರಂಭವಾಗಿ ಮಾರ್ಚ್ ತನಕ ಇರುತ್ತದೆ.
ಜಿಲ್ಲಾ ಕಂಬಳ ಸಮಿತಿ ಕೊರೊನಾ ಕಾರಣ ಈ ವರ್ಷ‌ ರಾತ್ರಿ ಕಂಬಳ ನಡೆಸದಿರಲು ತೀರ್ಮಾನಿಸಿದೆ. ಇದರ ಬದಲು ಹಗಲು ಇಡೀ ಕಂಬಳ ನಡೆಯಲಿದೆ. ಕೊರೊನಾ ನಿರ್ಬಂಧಗಳು ಜಾರಿಯಲ್ಲಿರುವುದರಿಂದ ಪೂರ್ಣ ಪ್ರಮಾಣದ ಕಂಬಳ ನಡೆಸುವುದು ಅಸಾಧ್ಯ. ಹೀಗಾಗಿ ಇಡೀ ಹಗಲು ಮಾತ್ರ ಕಂಬಳ ನಡೆಸಲು ಅನುಮತಿ ಕೊಡುವಂತೆ ಸರಕಾರಕ್ಕೆ ಮನವಿ ಮಾಡಲಿದ್ದೇವೆ ಎಂದು ಕಂಬಳ ಸಮಿತಿ ಸದಸ್ಯರೊಬ್ಬರು ತಿಳಿಸಿದ್ದಾರೆ.
ಸರಕಾರದ ಅನುಮತಿ ಸಿಕ್ಕಿದರೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಈ ವರ್ಷ 20 ಕಂಬಳಗಳು ನಡೆಯಬಹುದು.
ನಿಯಮ ಪಾಲನೆಯೆ ಸಮಸ್ಯೆ
ಕಂಬಳದಂಥ ಜನಪ್ರಿಯ ಜಾನಪದ ಕ್ರೀಡೆಯಲ್ಲಿ ಕೊರೊನಾ ನಿಯಮ ಪಾಲನೆಯೇ ದೊಡ್ಡ ಸಮಸ್ಯೆ. ಕಂಬಳ ಎಲ್ಲಿಯೇ ಇದ್ದರೂ ಹೋಗುವ ಉತ್ಸಾಹಿಗಳು ಅನೇಕ ಮಂದಿ ಇದ್ದಾರೆ. ದೊಡ್ಡ ದೊಡ್ಡ ಕಂಬಳಕ್ಕೆ ಲಕ್ಷಗಟ್ಟಲೆ ಜನ ಸೇರುತ್ತಾರೆ. ಇಂಥ ಕಡೆ ಜನ ಸಂದಣಿಯನ್ನು ನಿಭಾಯಿಸುವುದು ಕಷ್ಟ. ಕಂಬಳದಿಂದಾಗಿ ಕೊರೊನಾ ಪ್ರಸರಣ ತೀವ್ರವಾದರೆ ಅದರಿಂದ ಕಂಬಳಕ್ಕೆ ಕೆಟ್ಟ ಹೆಸರು ಬರಬಹುದು ಎಂಬ ಆತಂಕ ಸಂಘಟಕರದ್ದು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!