Homeಸ್ಥಳೀಯ ಸುದ್ದಿಬೆಳ್ಮಣ್ ನಾರಾಯಣ ಗುರು ಸೇವಾ ಸಂಘದಿಂದ ಜಯ ಸುವರ್ಣರಿಗೆ ನುಡಿ ನಮನ

Related Posts

ಬೆಳ್ಮಣ್ ನಾರಾಯಣ ಗುರು ಸೇವಾ ಸಂಘದಿಂದ ಜಯ ಸುವರ್ಣರಿಗೆ ನುಡಿ ನಮನ


ಕಾರ್ಕಳ, ನ.6 : ಇತ್ತೀಚೆಗೆ ನಿಧನರಾದ ಸಮಾಜರತ್ನ ಜಯ ಸಿ. ಸುವರ್ಣ ಅವರಿಗೆ ನುಡಿ ನಮನ ಸಲ್ಲಿಸುವ ಕಾರ್ಯಕ್ರಮ ಬೆಳ್ಮಣ್ ಬಿಲ್ಲವರ ಭವನದಲ್ಲಿ ನಡೆಯಿತು. ಅಧ್ಯಕ್ಷತೆ ವಹಿಸಿ ಮಾತನಾಡಿದ ಸಮಿತಿಯ ಗೌರವ ಅಧ್ಯಕ್ಷ ಎಸ್. ಕೆ.ಸಾಲ್ಯಾನ್ ಅವರು ಜಯ ಸುವರ್ಣ ಸಮಾಜದ ಅಭಿವೃದ್ಧಿಗಾಗಿ ಸಮರ್ಪಣೆ ಆದವರು. ನಾರಾಯಣ ಗುರುಗಳು ಹೇಳಿದ “ಸಂಘಟನೆಯಿಂದ ಬಲಯುತರಾಗಿ” ಎಂಬ ನುಡಿಯನ್ನು ಅನುಷ್ಠಾನಕ್ಕೆ ತಂದವರು ಅವರು. ಅವರ ದಿವ್ಯಾತ್ಮಕ್ಕೆ ಶಾಂತಿ ಸಿಗಲಿ ಎಂದರು. ಮುಂಬೈಯ ಬಿಲ್ಲವ ಯೂನಿಯನ್ ಉಪಾಧ್ಯಕ್ಷರಾದ ಹರೀಶ ಜಿ. ಅಮೀನ್ ಅವರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಸಂಸ್ಮರಣಾ ಭಾಷಣ ಮಾಡಿದ ಜೇಸಿಐ ರಾಷ್ಟ್ರೀಯ ತರಬೇತುದಾರ ರಾಜೇಂದ್ರ ಭಟ್ ಕೆ. ಅವರು ಬ್ರಹ್ಮಶ್ರೀ ನಾರಾಯಣ ಗುರುಗಳು ಹಚ್ಚಿದ ದೀಪದ ಬೆಳಕಿನಲ್ಲಿ ಜಯ ಸುವರ್ಣರಂಥ ಮಹನೀಯರು ಸಮಾಜವನ್ನು ಮುನ್ನಡೆಸಿದರು. ಗುರುಗಳ ಆದರ್ಶವನ್ನು ಜಗತ್ತಿನಾದ್ಯಂತ ಪಸರಿಸಿದರು. ಸಮಾಜ ಸೇವೆ ಮತ್ತು ಸಂಘಟನೆ ಇಂದಿನ ದಿನದಲ್ಲಿ ಬಹಳ ಕಷ್ಟ. ಭಾಷಣ ಮಾಡುವುದು ಸುಲಭ. ಜಯ ಸುವರ್ಣರು ತಮ್ಮನ್ನು ದ್ವೇಷಿಸಿದವರನ್ನೂ ಹತ್ತಿರಕ್ಕೆ ಕರೆದು ಸಂಘಟನೆಯನ್ನು ಬೆಳೆಸಿದರು. ಆದ್ದರಿಂದ ಅವರ ಸ್ಮರಣೆ ನಿತ್ಯ ಸ್ಮರಣೆಯಾಗಲಿ ಎಂದರು.
ಭಾರತ ಬ್ಯಾಂಕಿನ ಓರ್ವ ನಿರ್ದೇಶಕರಾದ ಪುರುಷೋತ್ತಮ ಕೋಟ್ಯಾನ್, ಉಡುಪಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಕಟಪಾಡಿ ಶಂಕರ ಪೂಜಾರಿ, ಪಡುಬೆಳ್ಳೆ ನಾರಾಯಣ ಗುರು ವಿದ್ಯಾಸಂಸ್ಥೆಗಳ ಮುಖ್ಯ ಅಧ್ಯಾಪಕ ಜಿನರಾಜ್ ಸಾಲಿಯಾನ್ ಮೊದಲಾದವರು ನುಡಿ ನಮನ ಸಲ್ಲಿಸಿದರು. ಪತ್ರಕರ್ತ ಪರಮಾನಂದ ಸಾಲ್ಯಾನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಿತಿಯ ಅಧ್ಯಕ್ಷ ಸತೀಶ್ ಎರ್ಮಾಳ್‌ ಸ್ವಾಗತಿಸಿದರು. ವಸಂತ್ ನಂದಳಿಕೆ ಅವರು ಕಾರ್ಯಕ್ರಮ ನಿರ್ವಹಣೆ ಮಾಡಿ ಧನ್ಯವಾದ ಅರ್ಪಿಸಿದರು.

LEAVE A REPLY

Please enter your comment!
Please enter your name here

Latest Posts

error: Content is protected !!