Sunday, October 17, 2021
spot_img
Homeಕ್ರೀಡೆಐಪಿಲ್ ಅಂತಿಮ ಹಣಾಹಣಿಗೆ ಕ್ಷಣಗಣನೆ

ಐಪಿಲ್ ಅಂತಿಮ ಹಣಾಹಣಿಗೆ ಕ್ಷಣಗಣನೆ

ಈ ವರ್ಷದ ಐಪಿಲ್ ಕೂಟದಲ್ಲಿ ನಾಲ್ಕು ತಂಡಗಳು ಅಂತಿಮ ಹಣಾಹಣಿಗೆ ಸಿದ್ಧವಾಗಿವೆ. ಕೇವಲ ನಾಲ್ಕು ಪಂದ್ಯಗಳು ಬಾಕಿ ಇವೆ. ಬಲಿಷ್ಟ ಮುಂಬೈ ತಂಡವನ್ನು ಯಾರೂ ಊಹೆ ಮಾಡದ ರೀತಿಯಲ್ಲಿ ಹತ್ತು ವಿಕೆಟುಗಳಿಂದ ಸೋಲಿಸಿ ಸನ್ ರೈಸರ್ ಹೈದರಾಬಾದ್ ತಂಡ ಎಲಿಮಿನೇಟರನಲ್ಲಿ ಸ್ಥಾನ ಪಡೆಯಿತು. ಅಷ್ಟೇ ಅಂಕ ಪಡೆದಿದ್ದ ಕೋಲ್ಕತ್ತಾ ತಂಡ ಕಡಿಮೆ ನೆಟ್ ರನ್ ಧಾರಣೆಯಿಂದ ಕೂಟದಿಂದ ನಿರ್ಗಮಿಸಿತು. ಕೆ. ಎಲ್. ರಾಹುಲ್ ಅವರಂಥ ಶ್ರೇಷ್ಟ ಆಟಗಾರನನ್ನು ಹೊಂದಿದ ಪಂಜಾಬ್ ಕೊನೆಯ ಕೆಲವು ಪಂದ್ಯಗಳಲ್ಲಿ ಹೋರಾಟವನ್ನು ಮಾಡಿದರೂ ಅದೃಷ್ಟ ಅವರ ಜೊತೆ ಇಲ್ಲದೆ ಹೊರಬಿತ್ತು. ಪ್ರಾಯಶಃ ಕ್ರಿಸ್ ಗೇಲ್ ಮೊದಲಿನಿಂದ ಎಲ್ಲ ಮ್ಯಾಚ್ ಆಡಿದ್ದರೆ ಅವರು ತೇರ್ಗಡೆ ಆಗುವ ಎಲ್ಲ ಸಾಧ್ಯತೆ ಇತ್ತು. ಡ್ಯಾಡಿಗಳ ತಂಡ ಚೆನ್ನೈ ಬಲಿಷ್ಟ ತಂಡಗಳನ್ನು ಕೊನೆಯ ಹಂತದಲ್ಲಿ ಸೋಲಿಸಿತು. ಆದರೆ ಕ್ವಾಲಿಫಯರ್ ಹಂತಕ್ಕೆ ಹೋಗಲು ಬೇಕಾದ ಫಯರ್ ಅವರ ಬಳಿ ಇರಲೇ ಇಲ್ಲ. ದುರಂತ ಎಂದರೆ ಸಂಜು
ಸ್ಯಾಮ್ಸನ್ ಅವರಂಥ ಪ್ರತಿಭೆಯ ಪರ್ವತಗಳನ್ನು ಹೊಂದಿದ್ದ ರಾಜಸ್ಥಾನ್ ರಾಯಲ್ಸ್ ಕೊನೆಯ ಸ್ಥಾನದಲ್ಲಿ ನಿಂತದ್ದು! ಇದು ನಂಬಲು ಸಾಧ್ಯವೇ ಇಲ್ಲ. RCB ತಂಡ ನಾಲ್ಕನೇ ಸ್ಥಾನದಲ್ಲಿ ನಿಂತು ಅದೃಷ್ಟದ ಬಲದಲ್ಲಿ
ಎಲಿಮಿನೆಟರ್ ಹಂತಕ್ಕೆ ಬಂದಿದೆ. ನವಂಬರ್ ಐದರಂದು ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಮುಂಬೈ ಮತ್ತು ಡೆಲ್ಲಿ ಮುಖಾಮುಖಿ ಆಗಲಿವೆ. ನವಂಬರ್ ಆರರಂದು ಮೊದಲ ಎಲಿಮಿನೇಟರ ಪಂದ್ಯದಲ್ಲಿ RCB ಮತ್ತು SRH ತಂಡಗಳು ಜಿದ್ದಿಗೆ ಬಿದ್ದು ಆಡಲಿವೆ. ಕೊನೆಯ ಕೆಲವು ಪಂದ್ಯಗಳ ನಿರ್ವಹಣೆ ನೋಡಿದಾಗ RCB ಆತ್ಮವಿಶ್ವಾಸ ಬಾಟಮ್ ತಲುಪಿದೆ. SRH ಆಟಗಾರರೆಲ್ಲ ಫಾರ್ಮಿಗೆ ಬಂದಿದ್ದಾರೆ. ಸಂದೀಪ್ ಶರ್ಮಾ ಮತ್ತು ರಶೀದ್ ಖಾನ್ ವಿಕೆಟ್ ಮೇಲೆ ವಿಕೆಟ್ ಗಳಿಸುತ್ತಿದ್ದಾರೆ. ಏನಿದ್ದರೂ ಅನಿಶ್ಚಿತತೆಯ ಹಾವು ಏಣಿ ಆಟಕ್ಕೆ ಹೆಸರಾಗಿರುವ T20 ಕ್ರಿಕೆಟನಲ್ಲಿ ಏನು ಬೇಕಾದರೂ ಆಗಬಹುದು. ಯಾವ ತಂಡ ಬೇಕಾದರೂ ಗೆಲ್ಲಬಹುದು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!