ಎರಡನೇ ಸ್ಥಾನಕ್ಕೆ ನೆಗೆದ ಆರ್‌ಸಿಬಿ

ಐಪಿಲ್ ಎರಡನೇ ಸ್ಥಾನದಲ್ಲಿ ಆರ್‌ಸಿಬಿ.  ಈ ವರ್ಷದ ಐಪಿಲ್ ಪಾಯಿಂಟ್ಸ್ ಪಟ್ಟಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನಿನ್ನೆಯ ಪಂದ್ಯದ ನಂತರ ಮುಂಬೈ ತಂಡವನ್ನು ಹಿಂದೆ ಹಾಕಿ ಎರಡನೆಯ ಸ್ಥಾನವನ್ನು ಪಡೆದಿದೆ. ನಿನ್ನೆ ನಡೆದ ಪಂದ್ಯದಲ್ಲಿ ಆರ್‌ಸಿಬಿ ಕೋಲ್ಕತಾ ತಂಡವನ್ನು ಪ್ರಭುತ್ವ ಪೂರ್ಣವಾಗಿ ಎಂಟು ವಿಕೆಟ್ ಅಂತರದಲ್ಲಿ ಸೋಲಿಸಿದೆ. ಮೊಹಮದ್ ಸಿರಾಜ್ ಮೂರು ಪ್ರಮುಖ ವಿಕೆಟ್ ಕಿತ್ತು ವಿಜಯದ ರೂವಾರಿ ಆಗಿ ಮೂಡಿ ಬಂದರು. ಈಗ 10 ಪಂದ್ಯಗಳಲ್ಲಿ 7 ಪಂದ್ಯಗಳನ್ನು ಗೆದ್ದು 14 ಅಂಕಗಳೊಂದಿಗೆ ಆರ್‌ಸಿಬಿ ತಂಡ ಎರಡನೇ ಸ್ಥಾನದಲ್ಲಿ ಇದೆ. ಡೆಲ್ಲಿ ಕ್ಯಾಪಿಟಲ್ ತಂಡ ಮೊದಲ ಸ್ಥಾನದಲ್ಲಿ ಇದೆ.









































































































error: Content is protected !!
Scroll to Top