ಸುರೇಂದ್ರ ಬಂಟ್ವಾಳ್‌ ಹತ್ಯೆಗೂ ಕಿಶನ್‌ ಹೆಗ್ಡೆ ಕೊಲೆ ಪ್ರಕರಣದ ನಂಟು

ಮಂಗಳೂರು, ಅ.22: ಬಂಟ್ವಾಳದಲ್ಲಿ ಬುಧವಾರ ಹಾಡುಹಗಲೇ ನಡೆದ ಚಿತ್ರ ನಟ ಹಾಗೂ ಹಿಂದು ಮುಖಂಡ ಸುರೇಂದ್ರ ಬಂಟ್ವಾಳ್‌ ಹತ್ಯೆಗೂ ಇನ್ನಾದ ಕಿಶನ್‌ ಹೆಗ್ಡೆಹತ್ಯಾ ಪ್ರಕರಣ ತಳಕು ಹಾಕಿಕೊಂಡಿದೆ.  

ಸತೀಶ್‌ ಕುಲಾಲ್‌ ಎಂದು ಹೇಳಿಕೊಂಡ ವ್ಯಕ್ತಿಯೊಬ್ಬ ಮಾಧ್ಯಮಗಳಿಗೆ ಕಳುಹಿಸಿದ ಆಡಿಯೊ ಸಂದೇಶದಲ್ಲಿ  ಸುರೇಂದ್ರ ಬಂಟ್ವಾಳ್‌ ನನ್ನು ಕೊಂದದ್ದು ನಾನೇ. ಇದು ಇನ್ನಾದ ಕಿಶನ್‌ ಹೆಗ್ಡೆ ಹತ್ಯೆಗೆ ಪ್ರತೀಕಾರ ಎಂದು ಹೇಳಿಕೊಂಡಿದ್ದಾನೆ.  

ಬಿ.ಸಿರೋಡ್‌ ನಲ್ಲಿರುವ ಫ್ಲಾಟ್‌ ನಲ್ಲೇ ನಿನ್ನೆ ಸುರೇಂದ್ರ ಬಂಟ್ವಾಳ್ ಕೊಲೆಯಾಗಿದ್ದರು. ಇದು ಹಣಕಾಸಿನ ತಗಾದೆಯ ಹಿನ್ನೆಲೆಯಲ್ಲಿ ನಡೆದಿರುವ ಹತ್ಯೆ ಎಂದು ಹೇಳಲಾಗಿತ್ತು. ಪೊಲೀಸರ ಆರಂಭಿಕ ತನಿಖೆಯೂ ಈ ನಿಟ್ಟಿನಲ್ಲಿ ಸಾಗಿತ್ತು. ಆದರೆ ಇಂದು ಬಂದ ಆಡಿಯೊ ಸಂದೇಶ ಕೊಲೆ ಪ್ರಕರಣಕ್ಕೆ ತಿರುವು ನೀಡಿದೆ.

ಕೆಲ ದಿನಗಳ ಹಿಂದೆ ವಿಕ್ಕಿ ಶೆಟ್ಟಿ ಎಂದು ಹೇಳಿಕೊಂಡಿರುವ ವ್ಯಕ್ತಿ ಖಾಸಗಿ ವಾಹಿನಿಗೆ  ಫೋನ್‌ ಮಾಡಿ ಬೆಂಗಳೂರಿನಲ್ಲಿ ಹೊಟೇಲ್‌ ಉದ್ಯಮಿ ಮನೀಷ್‌ ಶೆಟ್ಟಿಯನ್ನು ಸಾಯಿಸಿದ್ದು ನನ್ನ ಹುಡುಗರು, ಇದು ಕಿಶನ್‌ ಹೆಗ್ಡೆ ಹತ್ಯೆಗೆ ಪ್ರತೀಕಾರ ಎಂದಿದ್ದನು.  ಇದೀಗ ಸುರೇಂದ್ರ ಬಂಟ್ವಾಳ್‌ ಪ್ರಕರಣವೂ ಇದೇ ನಿಟ್ಟಿನಲ್ಲಿ ಸಾಗಿರುವುದು ಕರಾವಳಿಯ ಭೂಗತ ಲೋಕ ಮತ್ತೆ ಚಿಗಿತುಕೊಂಡಿದೆಯೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ.

ಸುರೇಂದ್ರ ಬಂಟ್ವಾಳ್‌ ಹತ್ಯೆ ಮಾಡಿದ್ದು ನಾನೆ. ಸುರೇಂದ್ರ ಬಡ್ಡಿ ವ್ಯವಹಾರ ಮಾಡಿ ಅದರ ಹಣವನ್ನು ಕಿಶನ್‌ ಹೆಗ್ಡೆ ಹತ್ಯೆಯಂಥ ಪಾಪ ಕೃತ್ಯಗಳಿಗೆ ಉಪಯೋಗಿಸುತ್ತಿದ್ದ. 22 ವರ್ಷಗಳಿಂದ ನಾನು ಸುರೇಂದ್ರನ ಜೊತೆಗಿದ್ದೆ, ಅವನ ಎಲ್ಲ ವ್ಯವಹಾರಗಳು ನನಗೆ ಗೊತ್ತಿದೆ. ಕಿಶನ್‌ ಹೆಗ್ಡೆ  ಹತ್ಯೆಗೆ ಸುರೇಂದ್ರ ಹಣದ ಸಹಾಯ ಮಾಡಿದ್ದ. ತಪ್ಪು ಮಾಡುತ್ತಾ ಇದ್ದೀಯಾ ಎಂದು ಎಚ್ಚರಿಸಿದರೂ ಸುರೇಂದ್ರ ನನ್ನ ಮಾತು ಕೇಳಲಿಲ್ಲ. ಕಿಶನ್‌ ಹೆಗ್ಡೆ  ಹತ್ಯೆ ಪ್ರಕರಣದ ಆರೋಪಿ ಮನೋಜನಿಗೂ ಸಹಾಯ ಮಾಡುತ್ತಿದ್ದ. ಜೈಲಿನಲ್ಲಿರುವ ಕೋಡಿಕೆರೆ ಮನೋಜನಿಗೆ ಬಟ್ಟೆ ತಲುಪಿಸಿದ್ದ.  ಮನೋಜ ಮತ್ತು ಸುರೇಂದ್ರ ಸೇರಿ ಹಲವು ಪಾಪ ಕೃತ್ಯಗಳನ್ನು ಮಾಡಿದ್ದಾರೆ ಎಂಬುದಾಗಿ ಸತೀಶ್‌ ಕುಲಾಲ್‌ ಈ ಆಡಿಯೊ ಸಂದೇಶದಲ್ಲಿ ಹೇಳಿಕೊಂಡಿದ್ದಾನೆ.

ಕಿಶನ್‌ ಹೆಗ್ದೆ

ಕಿಶನ್‌ ಹೆಗ್ಡೆಯನ್ನು ಸೆ.24ರಂದು ಹಿರಿಯಡ್ಕ ಪೇಟೆಯಲ್ಲಿ ಹಾಡುಹಗಲೇ ತಂಡವೊಂದು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದೆ.



































































































error: Content is protected !!
Scroll to Top