ಐಪಿಎಲ್‌ನಿಂದಾಗಿ ರಾತ್ರಿ ಬೆಳಗಾಗುವುದರಲ್ಲಿ ಹೀರೊ ಅದ ಸ್ಲಂ ಹುಡುಗ

ಐಪಿಲ್ ಪಂದ್ಯಗಳು ಯಾರ್ಯಾರನ್ನೋ ಹೀರೊ ಮಾಡುತ್ತಿವೆ. ಯಾರ್ಯಾರನ್ನೋ ವಿಲನ್ ಮಾಡುತ್ತಿವೆ. ಮೊಹಮದ್ ಸಿರಾಜ್ ಸತತ ಪರಿಶ್ರಮದಿಂದ ತಲುಪಬೇಕಾದ ಗಮ್ಯವನ್ನು ತಲುಪಿದ್ದಾರೆ. RCB ತಂಡದ ಪರವಾಗಿ ಆಡುತ್ತ ಕೋಲ್ಕತ್ತಾ ತಂಡದ ವಿರುದ್ಧ ವಿಜಯದ ರೂವಾರಿ ಆಗಿ ಮೂಡಿ ಬಂದಿದ್ದಾರೆ. 4-2-8-3 ಇದು ಅವರ ಮ್ಯಾಜಿಕಲ್ ಸ್ಪೆಲ್. ಇದುವರೆಗಿನ ಐಪಿಲ್ ಪಂದ್ಯಗಳಲ್ಲಿ ಯಾವ ಬೌಲರ್ ಕೂಡ ಎರಡು ಮೇಡನ್ ಓವರ್ ಎಸೆದ ಉದಾಹರಣೆ ಇರಲಿಲ್ಲ. ಹಿಂದಿನ ಪಂದ್ಯಗಳಲ್ಲಿ ದುಬಾರಿ ಆಗಿದ್ದ ಸಿರಾಜ್ ಸಿಕ್ಕಾಪಟ್ಟೆ ಜಾಲತಾಣಗಳಲ್ಲಿ ಟ್ರೊಲ್ ಆಗಿದ್ದರು. 

ಇನ್ನೇನು ಅವರ ಭವಿಷ್ಯ ಮುಗಿದು ಹೋಯಿತು ಎಂದು ಹಲವರು ಭವಿಷ್ಯ ನುಡಿದಾಗಿತ್ತು. ಸಿರಾಜ್ ಸ್ಲಂ ಹುಡುಗ. ತೀವ್ರ ಬಡತನದ ಹಿನ್ನೆಲೆಯಿಂದ ಬಂದವರು. ಅವರ ತಂದೆ ರಿಕ್ಷಾ ಡ್ರೈವರ್. ತಾಯಿ ಗೃಹಿಣಿ. ಸ್ವಂತ ಮನೆ ಇರಲಿಲ್ಲ. ಬೈಸಿಕಲ್ ಮೇಲೆ ತಿರುಗಾಡುತ್ತಿದ್ದ ಹುಡುಗ ಐಪಿಲ್ ವೇದಿಕೆಯಿಂದ ಸಕ್ಕತ್ ಫೇಮಸ್ ಆಗಿದ್ದಾರೆ. ಇದೀಗ ಸ್ವಂತ ಮನೆ ಕಟ್ಟಿದ್ದಾರೆ. ಊರಿನ ಜನ ಟಿವಿ ನೋಡಿ ನಮ್ಮ ಹುಡುಗ ಎನ್ನುತ್ತಿದ್ದಾರೆ. ತನ್ನ ಮೇಲೆ ಭರವಸೆ ಇಟ್ಟ ಟೀಮ್ ಮ್ಯಾನೇಜ್ಮೆಂಟ್ ಮತ್ತು ಕ್ಯಾಪ್ಟನ್ ಕೊಹ್ಲಿ ಬಗ್ಗೆ ಸಿರಾಜ್ ಅಭಿಮಾನದ ಮಾತನ್ನು ಹೇಳಿದ್ದಾರೆ. ಮುಂದೆ ಕ್ರಿಕೆಟಿನಲ್ಲಿ ಭಾರೀ ಎತ್ತರಕ್ಕೆ ಬೆಳೆಯುವ ಲಕ್ಷಣಗಳು ಆತನಲ್ಲಿ ಇವೆ. ಆಲ್ ದಿ ಬೆಸ್ಟ್ ಸಿರಾಜ್.



































































































error: Content is protected !!
Scroll to Top