ಹಿಂದು ಸಂಘಟನೆ ಕೆಂಗಣ್ಣಿಗೆ ಗುರಿಯಾದ ಲಕ್ಷ್ಮೀ ಬಾಂಬ್‌

ಮುಂಬಯಿ: ಇದೀಗ ಲಕ್ಷ್ಮೀ ಬಾಂಬ್ ಸಿನೇಮಾಕ್ಕೆ ಕೂಡ ಸಂಕಟ. ಅಕ್ಷಯ ಕುಮಾರ್ ಅಭಿನಯದ ಲಕ್ಷ್ಮೀ ಬಾಂಬ್ ಸಿನೆಮಾ ಕೂಡ ಇದೀಗ ತೊಂದರೆಯಲ್ಲಿ ಸಿಲುಕಿದೆ. ಹಿಂದೂ ಸೇನೆ ಈ ಸಿನೆಮಾ ಬಿಡುಗಡೆ ಮಾಡಲು ಬಿಡುವುದಿಲ್ಲ ಎಂದು ಹೇಳಿದೆ. ಈ ಸಿನೆಮಾದ ಟೈಟಲ್ ಬಗ್ಗೆ ನಮ್ಮ ತಕರಾರು ಇದೆ. ದೇವಿ ಲಕ್ಷ್ಮೀ ಹೆಸರಿನ ಪಕ್ಕದಲ್ಲಿ ಬಾಂಬ್ ಸೇರಿಸಿ ಅಪಮಾನ ಮಾಡಲಾಗಿದೆ. ಹಾಗೆಯೇ ಸಿನೆಮಾದಲ್ಲಿ ಲವ್ ಜೆಹಾದ್ ಬೆಂಬಲಿಸುವ ದೃಶ್ಯಗಳು ಇವೆ. ಹಿಂದೂ ಧರ್ಮದ ಆಚರಣೆಯನ್ನು ಅಪಹಾಸ್ಯ ಮಾಡಲಾಗಿದೆ. ಆದ್ದರಿಂದ ಈ ಸಿನೆಮಾ ಬಿಡುಗಡೆ ಬಿಡುವ ಮಾತೇ ಇಲ್ಲ. ಅದರ ವಿರುದ್ಧ ದೇಶದಾದ್ಯಂತ ಪ್ರತಿಭಟನೆ ಮಾಡಲಿದ್ದೇವೆ ಎಂದು ಹಿಂದೂ ಸೇನೆ ಹೇಳಿದೆ. ಈ ಸಿನೆಮಾವು ತಮಿಳಿನ ಕಾಂಚನ ಸಿನೆಮಾದ ರಿಮೇಕ್ ಆಗಿದ್ದು ರಾಘವ್ ಲಾರೆನ್ಸ್ ನಿರ್ದೇಶನ ಮಾಡಿದ್ದಾರೆ.ಅಕ್ಷಯ್‌ ಕುಮಾರ್‌ ನಾಯಕನಾಗಿ ನಟಿಸಿದ್ದಾರೆ.



































































































error: Content is protected !!
Scroll to Top