ನೆನಪಿಡಬೇಕಾದ ದಿನಾಂಕಗಳು
-ಅರ್ಜಿ ಸಲ್ಲಿಸಲು ಶುರು : 23-10-2020
-ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 06-11-2020

-preliminary ಪರೀಕ್ಷೆ : ಡಿ.4, 12 ಮತ್ತು13
-ಮುಖ್ಯ ಪರೀಕ್ಷೆ (ಆನ್ ಲೈನ್ ನಲ್ಲಿ): 24 -01 2021
-provisional allotment list: 01-04- 2021
website:https://ibpsonline.ibps.in/crpcl10aug20/
ದಿಲ್ಲಿ: ಬ್ಯಾಂಕುಗಳಲ್ಲಿ ನೌಕರಿಗೆ ಸೇರಬೇಕೆಂಬ ಆಶೆಯಿದೆಯೇ ಇಲ್ಲಿದೆ ನೋಡಿ ಅವಕಾಶ.ಬ್ಯಾಂಕ್ ಆಫ್ ಬರೋಡ, ಕೆನರ ಬ್ಯಾಂಕ್, ಇಂಡಿಯನ್ ಓವರ್ ಸೀಸ್ ಬ್ಯಾಂಕ್, ಯುಕೊ ಬ್ಯಾಂಕ್, ಬ್ಯಾಂಕ್ ಆಫ್ ಇಂಡಿಯಾ, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಪಂಜಾಬ್ ನ್ಯಾಶನಲ್ ಬ್ಯಾಂಕ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಮಹಾರಾಷ್ಟ್ರ, ಇಂಡಿಯನ್ ಬ್ಯಾಂಕ್, ಪಂಜಾಬ್ & ಸಿಂಧ್ ಬ್ಯಾಂಕ್ ಸೇರಿ ದೇಶದ ಪ್ರಮುಖ ಬ್ಯಾಂಕುಗಳಿಗೆ 2557 ಕ್ಲರ್ಕ್ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.
ಈ ಕುರಿತು ಬ್ಯಾಂಕುಗಳಿಗೆ ಸಿಬಂದಿಗಳನ್ನು ನೇಮಕ ಮಾಡುವ Institute of Banking Personnel Selection (IBPS) ಪ್ರಕಟನೆ ಹೊರಡಿಸಿದೆ. ನಿಜವಾಗಿ ಇದು ಹಿಂದೆ ಹೊರಡಿಸಿದ್ದ ಪ್ರಕಟನೆಯ ದಿನಾಂಕ ವಿಸ್ತರಣೆ.
ಅ.23ರಿಂದ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಮತ್ತೆ ಶುರುವಾಗಲಿದೆ. ನ.6ರ ತನಕ ಅರ್ಜಿ ಸಲ್ಲಿಸಬಹುದು.
ನ.6ಕ್ಕಾಗುವಾಗ ನಿಗದಿತ ಶೈಕ್ಷಣಿಕ ಅರ್ಹತೆಯನ್ನು ಗಳಿಸಿಕೊಳ್ಳುವವರ ಅನುಕೂಲಕ್ಕಾಗಿ IBPS ದಿನಾಂಕ ವಿಸ್ತರಣೆ ಮಾಡಿದೆ. ಈ ಮೊದಲು ಈ ಹುದ್ದೆಗಳಿಗಾಗಿ ಸೆ.2 ರಂದು ಪ್ರಕಟನೆ ಹೊರಡಿಸಲಾಗಿತ್ತು ಹಾಗೂ ಸೆ.23ಕ್ಕೆ ಕೊನೆಯ ದಿನಾಂಕವಾಗಿತ್ತು. ಆಗ 1557 ಹುದ್ದೆಗಳಿದ್ದವು, ಅದೀಗ 2557ಕ್ಕೆ ಏರಿಕೆಯಾಗಿದೆ.
IBPS Clerk preliminary ಪರೀಕ್ಷೆ ಡಿ.4, 12 ಮತ್ತು 13ರಂದು ನಡೆಯಲಿವೆ. ಮುಖ್ಯ ಪರೀಕ್ಷೆ ಆನ್ ಲೈನ್ ನಲ್ಲಿ 2021, ಜ. 24ರಂದು ನಡೆಯಲಿದೆ. provisional allotment list 2021, ಎ.1ರಂದು ಪ್ರಕಟವಾಗಲಿದೆ.
ವಿದ್ಯಾರ್ಹತೆ: ಸರಕಾರದ ಮಾನ್ಯತೆ ಹೊಂದಿರುವ ಯಾವುದೇ ವಿವಿಯ ಪದವಿ ಪಡೆದಿರಬೇಕು. ರಾಜ್ಯದ/ ಕೇಂದ್ರಾಡಳಿತ ಪ್ರದೇಶದ ಅಧಿಕೃತ ಭಾಷೆಯನ್ನು ಓದಲು, ಬರೆಯಲು ಮತ್ತು ಮಾತನಾಡಲು ತಿಳಿದಿರಬೇಕು.































