ರಾಜಕೀಯ ಪಡಸಾಲೆ- ಚುನಾವಣೆ ಇಲ್ಲದಿದ್ದರೂ ಚಲಾವಣೆಯಲ್ಲಿರುವ ಜಯಪ್ರಕಾಶ್ ಹೆಗ್ಡೆ

ರಾಜ್ಯ, ರಾಷ್ಟ್ರ ರಾಜಕಾರಣದಲ್ಲಿ ಜಯಪ್ರಕಾಶ್ ಹೆಗ್ಡೆಯವರಿಗೆ ಒಂದು ವಿಶೇಷವಾದ ಸ್ಥಾನ – ಮಾನ ಗೌರವವಿದೆ. ಸುಮಾರು ಮೂರೂವರೆ ದಶಕಗಳ ರಾಜಕೀಯ ಜೀವನದಲ್ಲಿ ಬೆಳೆದು ಬಂದ ಅನುಭವ ಜನ್ಯ ರಾಜಕಾರಣಿಯೂ ಹೌದು.1984ರಲ್ಲಿ ರಾಜಕೀಯಕ್ಕೆ ಪ್ರವೇಶ.ಮೊದಲಿಗೆ ಜನತಾದಳ ಶಾಸಕರಾಗಿ ವಿಧಾನಸಭೆ ಪ್ರವೇಶ.ಜೆ.ಎಚ್.ಪಟೇಲ್ ಅವರ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ಸ್ವೀಕರಿಸಿ ಅವಿಭಜಿತ ದ.ಕ. ಜಿಲ್ಲಾ ಉಸ್ತುವಾರಿ ಸಚಿವರಾಗಿ ಸಾಕಷ್ಟು ಅಭಿವೃದ್ಧಿ ಕಾಯ೯ದಲ್ಲಿ ತೊಡಗಿಸಿಕೊಂಡ ಹೆಗ್ಗಳಿಕೆಗೆ ಹೆಗ್ಡೆ ಯವರಿಗಿದೆ.ಇದನ್ನು ಜನರು ಇಂದಿಗೂ ನೆನಪಿಸಿಕೊಳ್ಳುತ್ತಾರೆ. ಉಡುಪಿ ಜಿಲ್ಲೆಯ ಹುಟ್ಟು ಇವರ ಉಸ್ತುವಾರಿಯಲ್ಲಿಯೇ ನಡೆದಿರುವುದು ಇವರ ಸಾಧನೆಗೆ ಇನ್ನೊಂದು ಚಿನ್ನದ ಗರಿ.ಕರಾವಳಿ ಜಿಲ್ಲೆಯಲ್ಲಿ ಪಕ್ಷಾತೀತರಾಗಿ ಜಯಶಾಲಿಗಳಾಗುವುದು ತುಂಬಾನೇ ಕಷ್ಟ.ಆದರೆ ಇದು ಸಾಧ್ಯ ಅನ್ನುವುದನ್ನು ಮೊದಲು  ನಮಗೆ ತೋರಿಸಿಕೊಟ್ಟವರು. ಮಾತ್ರವಲ್ಲ ಉಡುಪಿ – ಚಿಕ್ಕಮಗಳೂರು ಕ್ಷೇತ್ರದ ಸಂಸದರಾಗಿ ಉದ್ದಗಲಕ್ಕೂ ತಿರುಗಿ ಜನರ ಸಮಸ್ಯೆಗಳನ್ನು ಆಮೂಲಾಗ್ರವಾಗಿ ಅರಿತು ತಮ್ಮ ಕಿರು ಅವಧಿಯಲ್ಲಿಯೇ ಜನಪ್ರಿಯ ಸಂಸದರಾಗಿದ್ದರು. ರಾಜಕಾರಣದಲ್ಲಿದ್ದು ಶೈಕ್ಷಣಿಕ ವಲಯದಲ್ಲಿ ಒಬ್ಬ “intellectual politican” ಅನ್ನಿಸಿಕೊಂಡ ಕನಾ೯ಟಕದ ಕೆಲವೇ ರಾಜಕಾರಣಿಗಳಲ್ಲಿ ಇವರೂ ಒಬ್ಬರು.ಹಾಗಾಗಿ ಶೆೈಕ್ಷಣಿಕ ವಲಯದಲ್ಲಿ ನಡೆಯುವ ವಿಚಾರ ಸಂಕಿರಣಗಳಲ್ಲಿ ಹೆಗ್ಡೆ ಯವರ ಮಾತಿಗೆ ಬಹುವಾದ ಮಹತ್ವವಿದೆ.

ಇಷ್ಟೆಲ್ಲ ಅಹ೯ತೆ, ಗೌರವ, ಜನಮನ್ನಣೆ ಚಲಾವಣೆ  ಇದ್ದರೂ ಕೂಡಾ ಅವರು ನಂಬಿ ಕೊಂಡು ಬಂದ ಪಕ್ಷ ಅವರ ಮಾಗ೯ದಶ೯ನ ಪಡೆಯುವಲ್ಲಿ ಹೆಚ್ಚೇನು ಆಸಕ್ತಿ ವಹಿಸದ  ಹಾಗೇ ಕಾಣುವುದಿಲ್ಲ.ಹೆಗ್ಡೆಯವರು ಕೂಡಾ ಇತ್ತೀಚೆಗೆ  ರಾಜಕಾರಣದಲ್ಲಿ ಹೆಚ್ಚೇನು ಸದ್ದು ಮಾಡಿದ ಹಾಗೆ ಅನ್ನಿಸುವುದಿಲ್ಲ.

ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ಜಯಪ್ರಕಾಶ್ ಹೆಗ್ಡೆಯವರು  ಮೊನ್ನೆ ತನ್ನ ಹುಟ್ಟುಹಬ್ಬದ ಸಂದರ್ಭದಲ್ಲಿ newskarkala.com  ನ್ಯೂಸ್‌ ಡೆಸ್ಕ್ನ ಪಡಸಾಲೆಯಲ್ಲಿ ತಮ್ಮ‌ ಮನದಾಳದ ಮಾತುಗಳನ್ನು ನಿಮಗಾಗಿ ತೆರೆದಿಟ್ಟಿದ್ದಾರೆ.

ಹೆಗ್ಡೆಯವರೇ ರಾಜಕೀಯ ಮುತ್ಸದ್ದಿ ಪಟ್ಟ ಬಿಟ್ಟಿರಾ ಹೇಗೆ ?

ಹೆಗ್ಡೆ: (ನಗು) ಹಾಗೇನು ಇಲ್ಲ.ಸದ್ಯಕ್ಕೆ ಕೊರೊನ ದಿಂದ ತಿರುಗಾಟ ಸ್ವಲ್ಪ ಕಡಿಮೆ. ಆದರೆ ಜನರ ಒಡನಾಟವಿದೆ. ಅದೆಷ್ಟೋ ಮಂದಿ ತಮ್ಮ ಕೆಲಸಕ್ಕಾಗಿ ವಿಚಾರಿಸಿಕೊಂಡು ಬರುತ್ತಾರೆ,  ಫೋನ್ ಮಾಡುತ್ತಾರೆ.ಅವರ ಪ್ರೀತಿ ಗೌರವ ಅಭಿಮಾನವೇ ನನಗೆ ಅತೀ ದೊಡ್ಡ ಮುತ್ಸದಿ ಪಟ್ಟ.

ಈಗ ನಿಮ್ಮ ಬಿಡುವಿನ ಸಮಯವನ್ನು ಹೇಗೆ ಕಳೆಯುತ್ತೀರಿ ?

ಮೊದಲಿನಿಂದಲೂ ಓದುವುದು ನನ್ನ ಹವ್ಯಾಸ.ಈಗ ಓದಲಿಕ್ಕೆ ಸಾಕಷ್ಟು ಸಮಯ ಸಿಕ್ಕಿದೆ.ರಾಜಕಾರಣಿಯಾಗಲಿ ಅಧ್ಯಾಪಕರಾಗಲಿ ವ್ಯವರಸ್ಥರಾಗಲಿ ಓದುವ ಅಭ್ಯಾಸ ರೂಢಿಸಿ ಕೊಂಡಿರಬೇಕು. ಬಹುಮುಖ್ಯವಾಗಿ ನಮ್ಮ ರಾಜಕಾರಣಿಗಳಲ್ಲಿ ಓದುವ ಅಭ್ಯಾಸ ತೀರ ಕಡಿಮೆ.

ಕೊರೊನ ಸಂದರ್ಭದಲ್ಲಿ ಚುನಾವಣೆ ನಡೆಸುವುದು ಎಷ್ಟು ಸೂಕ್ತ?

ಹೆಗ್ಡೆ :ನಾನು ಕೂಡಾ ಇದನ್ನು ಬೆಂಬಲಿಸುವುದಿಲ್ಲ.ಕೋವಿಡ್ ವಿಷಮ ಸ್ಥಿತಿ ಯಲ್ಲಿ ಗ್ರಾಮ ಪಂಚಾಯತ್ ಚುನಾವಣೆ ನಡೆಸುವುದು ತುಂಬಾ ಅಪಾಯಕಾರಿ.ಇದಾಗಲೇ ಸರಕಾರ ಕೂಡಾ ಚುನಾವಣಾ ಆಯೋಗವನ್ನು ಕೇಳಿಕೊಂಡಿದೆ. ನ್ಯಾಯಾಂಗ ಕೂಡಾ ಇದಕ್ಕೆ ಪೂರಕವಾಗಿ ಸ್ಪಂದಿಸಬೇಕು ಅನ್ನುವುದು ನನ್ನ ಆಶಯ ಕೂಡಾ. ಸುಮಾರು ಎರಡು ವಷ೯ಗಳ ಹಿಂದೆ  ನಗರಸಭೆಗಳಿಗೆ ಚುನಾವಣೆ ನಡೆದು ಇನ್ನೂ ಅಧಿಕಾರ ಕಟ್ಟಲು ಸಾಧ್ಯವಾಗದ ಪರಿಸ್ಥಿತಿ ನಮ್ಮ ಮುಂದಿದೆ.ಹಾಗಾದರೆ ಚುನಾವಣೆ ನಡೆಯುವುದು ಮಾತ್ರ ಮುಖ್ಯವಾ?ಅದೇ ರೀತಿ ಇಲ್ಲಿ ಕೂಡಾ ನ್ಯಾಯಾಲಯ “letter of law ಗಿಂತ “sprit of law”ವನ್ನು ಪರಿಗಣಿಸಬೇಕು ಅನ್ನುವುದು ನನ್ನ ಪ್ರಾಥ೯ನೆ.

-ನೀವು ಶಿಕ್ಷಣ ಮತ್ತು ಶಿಕ್ಷಕರ ಜೊತೆ ಸಾಕಷ್ಟು ಒಡನಾಟ ಹೊಂದಿದವರು. ಮುಂದೆ ಶಿಕ್ಷಕರ ಕ್ಷೇತ್ರದಲ್ಲಿ ಸ್ಪಧಿ೯ಸಬಹುದಲ್ಲಾ?

ಹೆಗ್ಡೆ : ಈಗ ನಾನು ಬಿಜೆಪಿ ಪಕ್ಷದ ಸಾಮಾನ್ಯ ಕಾಯ೯ಕತ೯.ಇದನ್ನು ಪಕ್ಷ ನಿಧ೯ರಿಸ ಬೇಕು.ನಾನು ನಿಧ೯ರಿಸುವುದಲ್ಲ.ನಿಮ್ಮ ಪ್ರೀತಿಯ ಮಾತಿಗೆ ಕೃತಜ್ಞತೆ.

ಪ್ರೊ.ಕೊಕ್ಕಣೆ೯ ಸುರೇಂದ್ರ ನಾಥ ಶೆಟ್ಟಿ,ಉಡುಪಿ















































































































































error: Content is protected !!
Scroll to Top