ನವರಾತ್ರಿಯ ಐದನೇ ದಿನ ದೇವಿಯ ಅವತಾರ ಸ್ಕಂದ ಮಾತಾ. ಸ್ಕಂದ ಅಂದರೆ ಸುಬ್ರಮಣ್ಯ. ಆದ್ದರಿಂದ ಈಕೆ ಮಾತೃಸ್ವರೂಪಿ. ಈಕೆ ನಾಲ್ಕು ಭುಜ ಹೊಂದಿರುವ ಕಾರಣ ಚತುರ್ಭುಜೆ. ಆಕೆಯ ಎರಡು ಕೈಯಲ್ಲಿ ತಾವರೆಯ ಹೂ, ಒಂದು ಕೈಯಲಿ ಸ್ಕಂದ ಮತ್ತು ನಾಲ್ಕನೆಯ ಕೈಯ್ಯಲ್ಲಿ ಅಭಯ ಮುದ್ರೆ ಧರಿಸಿದವಳು. ಯಾವುದೇ ಆಯುಧ ಆಕೆಯ ಕೈಗಳಲ್ಲಿ ಇಲ್ಲ. ಮುಖದಲ್ಲಿ ಶಾಂತಿ ಮತ್ತು ಗಾಂಭಿರ್ಯ ಎದ್ದು ಕಾಣುತ್ತದೆ. ಸಿಂಹದ ಮೇಲೆ ಕುಳಿತವಳು ಸ್ಕಂದ ಮಾತಾ. ಬುದ್ದಿಕಾರಕನಾದ ಬುದ್ಧನನ್ನು ಒಲಿಸಿಕೊಂಡ ಕಾರಣ ಆಕೆ ಬುದ್ದಿಪ್ರದಾಯಿನಿ. ಆಕೆ ಪದ್ಮಾಸನದಲ್ಲಿ ಕುಳಿತುಕೊಂಡು ಇರುವ ಕಾರಣ ಪದ್ಮಾಸನ ಸ್ಥಿತ ದೇವಿ ಎಂದು ಕರೆಯಲ್ಪಡುವ ತಾಯಿ. ಕೆಂಪು ಗುಲಾಬಿ ಆಕೆಗೆ ಇಷ್ಟವಾದ ಹೂವು. ಆಕೆ ಶ್ವೇತ ವಸ್ತ್ರ ಧಾರಿಣಿ.
ನವರಾತ್ರಿಯ ಐದನೇ ದಿನದ ಪೂಜೆ ಸ್ಕಂದ ಮಾತೆಗೆ






































































