ನವರಾತ್ರಿಯ ಮೂರನೇ ದಿನ ದೇವಿಯ ಅವತಾರ ಚಂದ್ರಘಂಟಾ. ಈಕೆ ಹುಲಿಯ ಮೇಲೆ ಕುಳಿತವಳು. ಹತ್ತು ಕೈಯ್ಯಲ್ಲಿ ಹತ್ತು ಆಯುಧಗಳು. ತ್ರಿಶೂಲ, ಕಮಲ, ಗದೆ, ಕಮಂಡಲ, ಕತ್ತಿ, ಬಿಲ್ಲು, ಬಾಣ, ಜಪಮಾಲೆ, ಅಭಯಮುದ್ರೆ, ಜ್ಞಾನ ಮುದ್ರೆ ಇವುಗಳು ಆಕೆಯ ಕೈಯಲ್ಲಿ ಎದ್ದು ಕಾಣುತ್ತವೆ. ಹಣೆಯ ಮೇಲೆ ಮೂರನೇ ಕಣ್ಣು. ಅರ್ಧ ಚಂದ್ರಾಕಾರದ ತಿಲಕ ಅವಳ ಸೌಂದರ್ಯವನ್ನು ಹೆಚ್ಚಿಸುತ್ತದೆ. ಸೌಂದರ್ಯ, ಧೈರ್ಯ ಮತ್ತು ದಿಟ್ಟತನದ ಪ್ರತೀಕ ಚಂದ್ರಘಂಟಾ ದೇವಿ.ಚಂದ್ರಘಂಟಾ ದೇವಿ ಕೆಂಪು ವಸ್ತ್ರಧಾರಿಣಿ.
ನವರಾತ್ರಿಯ ಮೂರನೇ ದಿನದ ಪೂಜೆ ಚಂದ್ರಘಂಟಾ ದೇವಿಗೆ


































