ನಾಗಪುರ, ಅ.19 : ಮಹಾರಾಷ್ಟ್ರದ ಗಡ್ಚಿರೋಲಿಯ ಧನೊರ ತಾಲೂಕಿನ ಕೋಸ್ಮಿ-ಕಿಸ್ನೆಲಿ ಅರಣ್ಯದಲ್ಲಿ ಭಾನುವಾರ ನಾಲ್ವರು ಮಹಿಳೆಯರು ಸೇರಿ ಆರು ಮಂದಿ ನಕ್ಸಲರು ಪೊಲೀಸರ ಗುಂಡಿಗೆ ಬಲಿಯಾಗಿದ್ದಾರೆ.
ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ ಪೊಲೀಸರಿಗೆ ಸಿಕಿದ ಮಹತ್ವದ ಯಶಸ್ಸು ಇದು. ಎರಡು ವರ್ಷದ ಅವಧಿಯಲ್ಲಿ ವಿವಿಧ ಕಾರ್ಯಾಚರಣೆಗಳಲ್ಲಿ ಒಟ್ಟು ಒಟ್ಟು 20 ಮಾವೋವಾದಿಗಳನ್ನು ಪೊಲೀಸರು ಸಾಯಿಸಿದ್ದಾರೆ.
ನಕ್ಸಲರು ಅರಣ್ಯದಲ್ಲಿ ಇರುವ ಬಗ್ಗೆ ಮಾಹಿತಿ ಸಿಕ್ಕಿ ಪೊಲೀಸರು ಪ್ರದೇಶವನ್ನು ಸುತ್ತುವರೆದಿದ್ದಾರೆ. ಬಳಿಕ ಮಾವೋವಾದಿಗಳು ಮತ್ತು ಪೊಲೀಸರ ನಡುವೆ ಹಲವು ತಾಸುಗಳ ಕಾಲ ಗುಂಡಿನ ಚಕಮಕಿ ನಡೆದಿದೆ. 5 ಮೃತದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ. ಪ್ರದೇಶದಿಂದ ಹಲವು ವಸ್ತುಗಳನ್ನು ಕೂಡ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.ಪೊಲೀಸ್ ಕೇಂದ್ರ ಕಚೇರಿಗೆ ಹೆಲಿಕಾಪ್ಟರ್ ಮೂಲಕ ಮೃತ ಮಾವೋವಾದಿಗಳ ದೇಹವನ್ನು ತರಲಾಗಿದೆ. ಇವರುಗಳ ಗುರುತು ಇನ್ನಷ್ಟೇ ಪತ್ತೆಯಾಗಬೇಕಿದೆ.












