ಮುತ್ತಯ್ಯ ಮುರಳೀಧರನ್ ಬದುಕಿನ ಕಥೆ ಆಧಾರಿತ ಸಿನೆಮಾ 800. ಮುತ್ತಯ್ಯ ಟೆಸ್ಟ್ ಕ್ರಿಕೆಟಲ್ಲಿ ಪಡೆದ ಮತ್ತು ಬೇರೆ ಯಾರಿಗೂ ತಲುಪಲು ಸಾಧ್ಯವೇ ಆಗದ ವಿಕೆಟ್ ಸಂಖ್ಯೆ ಅದು. ವಿಜಯ್ ಸೇತುಪತಿ ಎಂಬ ತಮಿಳು ಮಹಾ ನಟ ಮುತ್ತಯ್ಯ ಮುರಳೀಧರನ್ ಪಾತ್ರದಲ್ಲಿ ಮಿಂಚಿದ್ದಾರೆ. ಸಿನೆಮಾ ಶೂಟಿಂಗ್ ಪೂರ್ತಿ ಆಗಿ ಸಿನೆಮಾ ಬಿಡುಗಡೆಗೆ ಕ್ರಿಕೆಟ್ ಅಭಿಮಾನಿಗಳು ಕಾಯುತ್ತಿದ್ದಾರೆ. ಆದರೆ ತಮಿಳುನಾಡಿನಲ್ಲಿ ಸಿನೆಮಾದ ವಿರುದ್ಧ ಆಗಲೇ ಪ್ರತಿಭಟನೆ ಆರಂಭವಾಗಿದೆ. ಮುತ್ತಯ್ಯ ಮುರಳೀಧರನ್ ಶ್ರೀಲಂಕಾದಲ್ಲಿ ತಮಿಳರ ವಿರುದ್ಧ ನಡೆದ ದಂಗೆಯಲ್ಲಿ ಭಾಗವಹಿಸಿದ್ದಾರೆ ಎನ್ನುವುದು ಒಂದು ಕಾರಣ ಆದರೆ ಸಿನೆಮಾದಲ್ಲಿ ತಮಿಳರನ್ನು ಅಪಮಾನ ಮಾಡುವ ದೃಶ್ಯಗಳು ಇವೆ ಎನ್ನುವುದು ಎರಡನೇ ಕಾರಣ. ತಮಿಳರು ಯಾವುದೇ ಹೋರಾಟವನ್ನು ಅರ್ಧಕ್ಕೇ ಬಿಟ್ಟ ಉದಾಹರಣೆಯೇ ಇಲ್ಲ. ಸೇತುಪತಿ ಆ ಪಾತ್ರವನ್ನು ಒಪ್ಪಿಕೊಳ್ಳ ಬಾರದು ಎಂದು ಆರಂಭದಲ್ಲಿ ಪ್ರತಿಭಟನೆ ನಡೆದಿತ್ತು. ಈಗ ಸಿನೆಮಾ ಬಿಡುಗಡೆ ಮಾಡಲು ಬಿಡುವುದಿಲ್ಲ ಎನ್ನುತ್ತಾರೆ ತಮಿಳು ಮಂದಿ. ಮುಂದೇನಾಗುವುದು ಎನ್ನುವುದು ಇನ್ನೊಂದು ಸಿನೆಮಾದ ಕಥೆ ಆಗಬಹುದು!
ರಾಜರಾಜೇಂದ್ರ ವರ್ಮ































