ದಿಲ್ಲಿ, ಅ. 19: ಕೇಂದ್ರ ಸರಕಾರದ ಅನ್‌ಲಾಕ್-5 ಮಾರ್ಗಸೂಚಿಯನ್ನನುಸರಿಸಿ ಮೂರು ರಾಜ್ಯಗಳು ಇಂದಿನಿಂದ ಶಾಲೆಗಳನ್ನು ತೆರೆದಿವೆ. ಪಂಜಾಬ್, ಉತ್ತರ ಪ್ರದೇಶ ಮತ್ತು ಸಿಕ್ಕಿಂ ರಾಜ್ಯಗಳಲ್ಲಿ ಸುಮಾರು 7 ತಿಂಗಳ ಬಳಿಕ ಮಕ್ಕಳು ಶಾಲೆಯತ್ತ ಹೊರಟಿದ್ದಾರೆ.
ಉತ್ತರ ಪ್ರದೇಶ ಮತ್ತು ಪಂಜಾಬ್ ನಲ್ಲಿ 9 ರಿಂದ 12ನೇ ತರಗತಿಯ ಮಕ್ಕಳಿಗೆ ಪಾಳಿಗಳಲ್ಲಿ ತರಗತಿಗಳನ್ನು ಪ್ರಾರಂಭಿಸಲಾಗಿದೆ. ಆದರೆ ಮಕ್ಕಳು ಶಾಲೆಗೆ ಬರಲು ಹೆತ್ತವರ ಒಪ್ಪಿಗೆ ಪತ್ರ ಕಡ್ಡಾಯ.ಸಿಕ್ಕಿಂನಲ್ಲಿ ಗ್ರೇಡ್ ಪದ್ಧತಿಯಲ್ಲಿ ತರಗತಿಗಳನ್ನು ಪುನರಾರಂಭಿಸಲಾಗಿದೆ.ಶಾಲೆಗೆ ಬರುವುದು ಮಕ್ಕಳ ಆಯ್ಕೆಗೆ ಬಿಟ್ಟದ್ದು. ತರಗತಿಗಳ ಜೊತೆಗೆ ಆನ್‌ಲೈನ್ ಕ್ಲಾಸ್ ಕೂಡ ಇರುತ್ತದೆ.











