ಮುಂಬಯಿ, ಅ.4: ಬಾಲಿವುಡ್ ನಟಿ ಮಿಸ್ಟಿ ಮುಖರ್ಜಿ ಕಿಡ್ನಿ ವೈಫಲ್ಯದಿಂದಾಗಿ ಬೆಂಗಳೂರಿನಲ್ಲಿ ಕೊನೆಯುಸಿರೆಳೆದಿದ್ದಾರೆ. 30ರ ಹರೆಯದ ನಟಿ ಶುಕ್ರವಾರ ತೀರಿಕೊಂಡಿದ್ದಾರೆ ಎಂದು ಅವರ ಪ್ರಚಾರಕಿ ಇಂದು ಬಹಿರಂಗಪಡಿಸಿದ್ದಾರೆ.
ರಣವೀರ್ ಶೋರೆ ನಟಿಸಿದ ಲೈಫ್ ಕಿ ತೊ ಲಗ್ ಜಾಯೇಗಿ ಚಿತ್ರದ ಮೂಲಕ ಬಾಲಿವುಡ್ ಪ್ರವೇಶಿಸಿದ್ದ ಮಿಸ್ಟಿ ಅನೇಕ ಚಿತ್ರಗಳಲ್ಲಿ ಚಿಕ್ಕಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಕೆಲವು ಮ್ಯೂಸಿಕ್ ಆಲ್ಭಂಗಳಲ್ಲೂ ನಟಿಸಿದ್ದಾರೆ.
ಕಿಟೊ ಡಯಟ್ ನಿಂದಾಗಿ ನಟಿಯ ಕಿಡ್ನಿ ವಿಫಲವಾಗಿತ್ತು. ಕಾರ್ಬೋಹೈಡ್ರೇಟ್ ಕಡಿಮೆ ಮಾಡಿ ಕೊಬ್ಬನ್ನು ಬೇರೆ ವಿಧದಲ್ಲಿ ಸೇವಿಸಿ ದೇಹ ಸೌಂದರ್ಯ ಕಾಪಾಡಿಕೊಳ್ಳುವುದನ್ನು ಕಿಟೊಜನಿಕ್ ಡಯಟ್ ಅಥವಾ ಸಂಕ್ಷಿಪ್ತವಾಗಿ ಕಿಟೊ ಡಯಟ್ ಎಂದು ಕರೆಯುತ್ತಾರೆ. ಅನೇಕ ಸಿನೇಮಾ ನಟ-ನಟಿಯರು ಈ ಡಯಟ್ ಮಾಡುತ್ತಿದ್ದಾರೆ. ಆದರೆ ಇದರಿಂದ ಕಿಡ್ನಿ ಹಾಗೂ ಇತರ ಅಂಗಗಳಿಗೆ ಹಾನಿಯಾಗುತ್ತದೆ ಎಂದು ವೈದ್ಯರು ಎಚ್ಚರಿಸುತ್ತಿದ್ದಾರೆ.
























