ಹುಟ್ಟಲಿರುವುದು ಗಂಡು ಮಗು ಎಂದು ಖಾತರಿಪಡಿಸಲು ಹೆಂಡತಿಯ ಹೊಟ್ಟೆಯನ್ನೇ ಸೀಳಿದ

ಬರೇಲಿ, ಸೆ. 20 : ಕೇಂದ್ರ ಸರಕಾರ ಹೆಣ್ಣು ಮಕ್ಕಳ ಮಹತ್ವವನ್ನು ಸಾರಲು ಬೇಟಿ ಬಚಾವೊ ಬೇಟಿ ಪಢಾವೊದಂಥ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದರೂ ಸಮಾಜದಲ್ಲಿ ಇನ್ನೂ ಗಂಡು ಮಗುವೇ ಬೇಕೆಂಬ ಗೀಳು ಕಡಿಮೆಯಾಗಿಲ್ಲ. ಉತ್ತರ ಪ್ರದೇಶದ ಬದಾಯೂ ಎಂಬಲ್ಲಿ ವ್ಯಕ್ತಿಯೊಬ್ಬ ಈ ಸಲ ತನಗೆ ಹುಟ್ಟುವುದು  ಗಂಡು ಮಗುವೇ ಎನ್ನುವುದನ್ನು ಖಾತರಿಪಡಿಸಲು ಮಾಡಿದ ಕೃತ್ಯ ಇಡೀ ನಾಗರಿಕ ಸಮಾಜವೇ ತಲೆ ತಗ್ಗಿಸುವಂತಿದೆ.

ಐದು ಹೆಣ್ಣು ಮಕ್ಕಳ ತಂದೆಯಾಗಿರುವ ಪನ್ನಾಲಾಲ್‌ಗೆ ಈ ಸಲವಾದರೂ ಹೆಂಡತಿ ಗಂಡು ಹೆರಬೇಕೆಂಬ ಆಶೆಯಿತ್ತು. ಆದರೆ ಭ್ರೂಣ ಪರೀಕ್ಷೆ ನಿಷೇಧಿಸಲ್ಪಟ್ಟಿರುವುದರಿಂದ ಹೆಂಡತಿ ಹೊಟ್ಟೆಯಲ್ಲಿರುವ ಮಗು ಹೆಣ್ಣೊ ಗಂಡೊ ಎಂದು ತಿಳಿಯದೆ ಚಡಪಡಿಸುತ್ತಿದ್ದ. ಕೊನೆಗೆ ಕುತೂಹಲ ತಾಳದೆ ಶನಿವಾರ ರಾತ್ರಿ ಹರಿತವಾದ ಕತ್ತಿಯಿಂದ ಗರ್ಭಿಣಿ ಹೆಂಡತಿಯ ಹೊಟ್ಟೆಯನ್ನೇ ಸೀಳಿದ್ದಾನೆ.ಮಹಿಳೆಯ ಬೊಬ್ಬೆ ಕೇಳಿ ನೆರೆಹೊರೆಯವರು ಓಡಿಬಂದು ಬರೇಲಿಯ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಗಂಭೀರವಾಗಿ ಗಾಯಗೊಂಡು  ಚಿಂತಾಜನಕ ಸ್ಥಿತಿಯಲ್ಲಿರುವ ಮಹಿಳೆ ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ.ಪನ್ನಾಲಾಲ್‌ನನ್ನು ಪೊಲೀಸರು ಬಂಧಿಸಿದ್ದಾರೆ.  













































error: Content is protected !!
Scroll to Top