ಅಕ್ರಮ ಗೋಸಾಗಾಟ : 52 ಮರಿ ಕೋಣಗಳು ವಶ

ಉಡುಪಿ, ಸೆ. 15: ಕಂಟೈನರ್‌ ನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 52 ಮರಿ ಕೋಣಗಳನ್ನು ವಶಪಡಿಸಿಕೊಂಡಿರುವ ಪೊಲೀಸರು ಈ ಸಂಬಂಧ ನಾಲ್ಕು ಮಂದಿಯನ್ನು ಬಂಧಿಸಿದ್ದಾರೆ. ಅಮಾಸೆಬೈಲು ಹೊಸಂದಡಿ ಚೆಕ್‌ಪೋಸ್ಟಿನಲ್ಲಿ ಈ ಕಾರ್ಯಾಚರಣೆ ನಡೆಸಲಾಯಿತು.

ದಾವಣಗೆರೆ ಜಿಲ್ಲೆಯ ಹರಹರದ ಮೆಹಬೂಬ್‌, ಬೆಳಗಾವಿ ಜಿಲ್ಲೆಯ ಬೈಲಹೊಂಗಲದ ಬಾಪು ಸಾಹೇಬ್‌, ದಾವಣಗೆರೆ ಚಿಕ್ಕನಹಳ್ಳಿಯ ಇಮ್ರಾನ್‌ ಮತ್ತು ಬೈಲಹೊಂಗಲದ ಆಸಿಫ್ ಬಂಧಿತ ಆರೋಪಿಗಳು.

ಅಮಾಸೆಬೈಲು ಪೊಲೀಸರು ಖಚಿತ ಮಾಹಿತಿಯ ಹಿನ್ನೆಲೆಯಲ್ಲಿ ವಾಹನ ತಪಾಸಣೆ ಮಾಡಿದಾಗ ಹುಲಿಕಲ್‌ ಘಾಟಿ ಮೂಲಕ ಬಂದ ಕಂಟೈನರ್‌ನಲ್ಲಿ  ಕೋಣದ ಮರಿಗಳನ್ನು ಹಿಂಸಾತ್ಮಕವಾಗಿ ಸಾಗಿಸುತ್ತಿರುವುದು ಪತ್ತೆಯಾಯಿತು. ಎರಡು ಕಂಟೈನರ್‌ ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.































































error: Content is protected !!
Scroll to Top