ನಾಪತ್ತೆಯಾಗಿದ್ದ ಮಾಳದ ಯುವತಿ ಮದುವೆಯಾಗಿ ಪತ್ತೆ

ಕಾರ್ಕಳ : ಕೆಲ ದಿನಗಳ ಹಿಂದೆ ನಾಪತ್ತೆಯಾಗಿದ್ದ ನಲ್ಲೂರಿನ ಬೇಕರಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದ ಮಾಳ ಗ್ರಾಮದ ಮಂಜಲ್ತಾರ್ ನ ಯುವತಿ ಅದೇ ಬೇಕರಿಯಲ್ಲಿ ಕೆಲಸ ಮಾಡಿಕೊಂಡಿದ್ದ ಅಸ್ಸಾಂ ಮೂಲದ ಬೊಬೆನ್‌ ಕರಿಯ ಎಂಬಾತನನ್ನು ಮದುವೆಯಾಗಿರುವ ವಿಚಾರ ಬೆಳಕಿಗೆ ಬಂದಿದೆ. ಧರ್ಮಸ್ಥಳದಲ್ಲಿ ಮದುವೆಯಾಗಿದ್ದು, ಅಲ್ಲಿಂದ ಹೊಸೂರಿಗೆ ತೆರಳಿ ಬಾಡಿಗೆ ಮನೆ ಮಾಡಿಕೊಂಡು ಬೊರೆನ್‌ ಶ್ರೀನಾಥ್‌ ಗ್ರಾನೈಟ್ಸ್ ಕಂಪೆನಿ ಕೆಲಸಕ್ಕೆ ಸೇರಿಕೊಂಡಿದ್ದರು. ಸೆ. 12ರಂದು ಕಾರ್ಕಳ ಗ್ರಾಮಾಂತರ ಠಾಣೆ ಪೊಲೀಸರು ನಮ್ಮನ್ನು ಹುಡುಕಾಡಿ ಠಾಣೆಗೆ ಕರೆತಂದಿರುತ್ತಾರೆ. ಬೊರೆನ್‌ ನಾನು ಪರಸ್ಪರ ಪ್ರೀತಿಸುತ್ತಿದ್ದ ಕಾರಣ ಮನೆಯಲ್ಲಿ ನೋಡಿದ ಹುಡುಗ ಇಷ್ಟವಿಲ್ಲದ ಕಾರಣ ಬೊರೆನ್‌ ಗೆ ತಿಳಿಸಿ ಸ್ವ ಇಚ್ಚೆಯಿಂದ ಮನೆಬಿಟ್ಟು ಹೋಗಿ ಮದುವೆಯಾಗಿರುವುದಾಗಿ ಆಕೆ ತಿಳಿಸಿದ್ದಾಳೆ.

































































































error: Content is protected !!
Scroll to Top