ಕಾಪು ಕಾರು ಅಪಘಾತ : ಇನ್ನೋರ್ವ ಸಾವು

ಉಡುಪಿ, ಸೆ.13 : ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾಪು ಮೆಸ್ಕಾಂ ಹಳೆ ಕಚೇರಿ ಎದುರು ಶುಕ್ರವಾರ ಸಂಭವಿಸಿದ  ಭೀಕರ ಕಾರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಜೀವನುರಣ ಹೋರಾಟ ನಡೆಸುತ್ತಿದ್ದ ಯುವಕ ಸಿಕಿತ್ಸೆ ಫಲಿಸದೆ  ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದು, ಇದರೊಂದಿಗೆ ಈ ಅವಘಾತದಲ್ಲಿ ಮಡಿದವರ ಸಂಖ್ಯೆ ಎರಡಕ್ಕೇರಿದೆ.

ಸೆ.11ರಂದು ಚಾಲಕನ ನಿಯಂತ್ರಣ ತಪ್ಪಿದ  ಕಾರು  ಹೆದ್ದಾರಿ ಡಿವೈಡರ್ ಮೇಲಿನ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಪರಿಣಾಮ ಯುವತಿ ಸ್ಥಳದಲ್ಲೇ ಮೃತಪಟ್ಟಿದ್ದು, ನಾಲ್ಕು ಮಂದಿ ಯುವಕರು ಗಾಯಗೊಂಡಿದ್ದರು.

ಈ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಹರೀಶ್ (30) ಎಂಬ ಯುವಕ ಇದೀಗ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಈತ ಉಡುಪಿ ಪರಿಸರದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದರು ಎಂದು ತಿಳಿದುಬಂದಿದೆ.

ವ್ಯಕ್ತಿಯ ವಾರಸುದಾರರು, ಸಂಬಂಧಿಕರು ಕಾಪು ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಕಾಪು ಪೊಲೀಸರು ವಿನಂತಿಸಿದ್ದಾರೆ.

ಕಾಪು ಠಾಣೆಯ ದೂರವಾಣಿ ಸಂಖ್ಯೆ 0820 2551033, ಪಿಎಸ್ಐ ಕಾಪು ಮೊಬೈಲ್ ಸಂಖ್ಯೆ 94808 05449 ಅಥವಾ ಉಡುಪಿ ನಿಯಂತ್ರಣ ಕೊಠಡಿಯ ದೂರವಾಣಿ ಸಂಖ್ಯೆ 0820 2526444 ಸಂಪರ್ಕಿಸಬಹುದಾಗಿದೆ.









































































































error: Content is protected !!
Scroll to Top