ಬೆಂಗಳೂರು, ಸೆ.8: ಕಿರಿತೆರೆ ಮತ್ತು ಬೆಳ್ಳಿತೆರೆ ನಟ ಸಿದ್ದರಾಜು ಕಲ್ಯಾಣಕರ್ (60) ಸೆ.8ರಂದು ನಿಧನರಾಗಿದ್ದಾರೆ. ಸೋಮವಾರವಷ್ಟೇ ಅವರು 60ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಮರುದಿನವೇ ವಿಧಿ ಅವರನ್ನು ಸೆಳೆದೊಯ್ದಿದೆ.
ಶ್ರೀ ಮಂಜುನಾಥ, ಬುದ್ಧಿವಂತ, ಸೂಪರ್ ಸೇರಿ ಸುಮಾರು 70 ಕನ್ನಡ ಚಿತ್ರಗಳು ಮತ್ತು ಅಸಂಖ್ಯಾತ ಟಿವಿ ಧಾರಾವಾಹಿಗಳಲ್ಲಿ ಅಭಿನಯಿಸಿದ್ದರು.
ಬದುಕು, ಗಿಣಿರಾಮ ಮತ್ತು ಪ್ರೇಮಲೋಕ ಧಾರಾವಾಹಿಗಳು ಅವರಿಗೆ ಹೆಸರು ತಂದುಕೊಟ್ಟಿದ್ದವು. ಅವರು ಪತ್ನಿ , ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

































