ಕಾರ್ಕಳ : ಜೆೆಸಿ ಕುಟುಂಬ ಸಮ್ಮಿಲನ ಕಾರ್ಯಕ್ರಮ ವೃಷಭರಾಜ್ ಕಡಂಬ ಅವರ ಮನೆಯಲ್ಲಿ ಇತ್ತೀಚೆಗೆ ಜರಗಿತು. ಈ ಸಂದರ್ಭ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ಜೇಸಿಸ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಾದ ಪೂರ್ವಿ ಹಾಗೂ ಹಿಬಾ, ಪ್ರತಿಭಾವಂತ ವಿದ್ಯಾರ್ಥಿನಿ ಸ್ನೇಹ ಅವರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಕಾರ್ಕಳ ಜೆಸಿಐ ಅಧ್ಯಕ್ಷ ದಿವಾಕರ್ ಎಂ. ಬಂಗೇರ, ಪೂರ್ವ ವಲಯ ಅಧ್ಯಕ್ಷ ಚಿತ್ತರಂಜನ್ ಶೆಟ್ಟಿ, ವೃಷಭರಾಜ್ ಕಡಂಬ, ಸಮದ್ ಖಾನ್, ಪದ್ಮಪ್ರಸಾದ್ ಜೈನ್, ದಿವ್ಯ ಸ್ಮಿತಾ ಭಟ್, ಜೇಸಿರೇಟ್ ಅಧ್ಯಕ್ಷೆ ಚಂದ್ರಿಕಾ ದಿವಾಕರ್, ಜೆಜೆಸಿ ಅಧ್ಯಕ್ಷ ಸುಹಾಸ್ ಉಪಸ್ಥಿತರಿದ್ದರು. ಪ್ರಸಾದ್ ಐಸಿರ ಸ್ವಾಗತಿಸಿ, ಶಿಕ್ಷಕಿ ವಂದನಾ ರೈ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.































