ಕಾರ್ಕಳ, ಸೆ.3: ಮಾಳದ ಸುರಕ್ಷಿತ (20) ಎಂಬ ಯುವತಿ ಕಾಣೆಯಾಗಿರುವ ಕುರಿತು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮಾಳದ ಮಂಜಲ್ತಾರ್ ಮಾರಿಗುಡಿ ಸಮೀಪದ ನಿವಾಸಿಯಾಗಿರುವ ಸುರಕ್ಷಿತ ಸೆ.2ರಂದು ಕೆಲಸಕ್ಕೆಂದು ಹೋದವಳು ವಾಪಾಸು ಬಂದಿಲ್ಲ ಎಂದು ತಾಯಿ ದೂರು ನೀಡಿದ್ದಾರೆ. ಸುರಕ್ಷಿತ ನಲ್ಲೂರಿನ ಬೇಕರಿಯೊಂದರಲ್ಲಿ ನೌಕರಿ ಮಾಡುತ್ತಿದ್ದಳು. ಸುರಕ್ಷಿತ ತಂಗಿಯ ಮೊಬೈಲ್ ಗೆ ಕರೆ ಮಾಡಿ ಮದುವೆ ನಿಶ್ಚಯವಾದ ಹುಡುಗನೊಂದಿಗೆ ವಿವಾಹವಾಗಲು ಇಷ್ಟವಿಲ್ಲದ ಕಾರಣ ಮನೆಬಿಟ್ಟು ಹೋಗುತ್ತಿರುವುದಾಗಿ ಹೇಳಿದ್ದಾಳೆಂದು ತಾಯಿ ದೂರಿನಲ್ಲಿ ತಿಳಿಸಿದ್ದಾರೆ.
ಮಾಳದ ಯುವತಿ ನಾಪತ್ತೆ



















