ಬಿಲ್ಲವರ ಎಸೋಸಿಯೇಶನ್‌ ಮೀರಾರೋಡು ಸ್ಥಳೀಯ ಕಚೇರಿಯಲ್ಲಿ ನಾರಾಯಣ ಗುರು ಜಯಂತಿ ಆಚರಣೆ

ಮುಂಬಯಿ,ಸೆ. 2: ಬಿಲ್ಲವರ ಎಸೋಸಿಯೇಶನ್ ಮುಂಬಯಿ ಇದರ ಮೀರಾರೋಡು ಸ್ಥಳೀಯ ಸಮಿತಿಯ ವತಿಯಿಂದ  ಬ್ರಹ್ಮಶ್ರೀ ನಾರಾಯಣ ಗುರು, ಅವರ 166ನೇ ಜಯಂತ್ಸೋತ್ಸವವು ಸೆ.2 ರಂದು ಮೀರಾರೋಡು ಪೂರ್ವದ ಶಾಂತಿ ನಗರದ ಸೆಕ್ಟರ್ 5 ರಲ್ಲಿರುವ  ಸ್ಥಳೀಯ ಕಚೇರಿಯ ಸಭಾಂಗಣದಲ್ಲಿ ಸಾಂಕೇತಿಕವಾಗಿ ಜರಗಿತು.

         ಸ್ಥಳೀಯ ಸಮಿತಿಯ, ಗೌರವ ಕಾರ್ಯಾಧ್ಯಕ್ಷ ಭೋಜ ಬಿ,ಸಾಲ್ಯಾನ್, ಕಾರ್ಯಾಧ್ಯಕ್ಷ ವಿಶ್ವನಾಥ ಎಮ್. ಸಾಲ್ಯಾನ್, ಉಪ ಕಾರ್ಯಾಧ್ಯಕ್ಷರಾದ ಸುಂದರ ಎ. ಪೂಜಾರಿ ಮತ್ತು ಸುಭಾಶ್ಚಂದ್ರ ಎಂ, ಕರ್ಕೇರ, ಕಾರ್ಯದರ್ಶಿ ಎನ್.ಪಿ.ಕೋಟ್ಯಾನ್, ಕೋಶಾಧಿಕಾರಿ ಎಚ್.ಎಮ್.ಪೂಜಾರಿ,  ಜೊತೆ ಕೋಶಾಧಿಕಾರಿ ವಿಜಯ ಎನ್, ಅಮೀನ್, ಸದಸ್ಯರಾದ ಅಶೋಕ ಆರ್ ಸಾಲ್ಯಾನ್,  ಸುಂದರಿ ಆರ್, ಕೋಟ್ಯಾನ್,, ವಿಶ್ವನಾಥ್ ಮಾಬಿಯನ್, ಲೀಲಾಧರ ಸನಿಲ್, ದಿನೇಶ್ ಸುವರ್ಣ, ದೀಪ ಬೆಳಗಿಸಿ ಚಾಲನೆ ನೀಡಿದರು. ಹಿರಿಯ ಸದಸ್ಯ ಹಾಗೂ ಅರ್ಚಕರಾದ ಶ್ಯಾಮ ಅಮೀನ್ ಮತ್ತು ಜೀವನ್ ಅಮೀನ್ ಅವರ ಪೌರೋತ್ಯದಲ್ಲಿ   ಓಂ ನಮೋ ನಾರಾಯಣಾಯ ನಮಃ ಶಿವಾಯ ಜಪ ಯಜ್ಞ, ವಿಶೇಷ ಪೂಜೆ,  ಮಹಾಮಂಗಳಾರತಿ, ನಡೆಯಿತು. ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವ ಸಿದ್ದಾಂತಗಳ ಬಗ್ಗೆ ಸ್ಥಳೀಯ ಸಮಿತಿಯ ಗೌ. ಕಾರ್ಯಾದರ್ಶಿ ಎನ್.ಪಿ.ಕೋಟ್ಯಾನ್ ಮಾಹಿತಿ ನೀಡಿ ಕಾರ್ಯಕ್ರಮ ನಿರ್ವಹಿಸಿದರು.

ಚಿತ್ರ – ವರದಿ: ರಮೇಶ್ ಅಮೀನ್









error: Content is protected !!
Scroll to Top