ಹಿರಿಯ ಲೇಖಕ –ಉದ್ಯಮಿ ಎಸ್ಕೆ ಹಳೆಯಂಗಡಿ ನಿಧನ

ಮುಂಬಯಿ, ಸೆ. 1: ಹಿರಿಯ ಲೇಖಕ ಹಾಗೂ ಉದ್ಯಮಿ ಎಸ್ಕೆ ಹಳೆಯಂಗಡಿ (85) ಅವರು ಅಲ್ಪಕಾಲದ ಅನಾರೋಗ್ಯದ ಬಳಿಕ ಸೆ.1ರಂದು ಬರೋಡಾದ ಸ್ವಗೃಹದಲ್ಲಿ ನಿಧನರಾಗಿದ್ದಾರೆ .

ಬಾಲ್ಯದಲ್ಲೇ ಮುಂಬಯಿಗೆ ಹೋಗಿ ರಾತ್ರಿ ಶಾಲೆಯಲ್ಲಿ ಕಲಿತು ಜೀವನದಲ್ಲಿ ನೆಲೆಯಾಗಿದ್ದ ಎಸ್ಕೆಯವರು ಅನಂತರ ಗುಜರಾತಿಗೆ ತೆರಳಿ ಅಲ್ಲಿನ ಬರೋಡಾದಲ್ಲಿ ಉದ್ಯಮಿಯಾಗಿ ಬೆಳೆದಿದ್ದರು. ಬರೋಡಾ ತುಳು ಸಂಘ ಸೇರಿ ಹಲವು ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.

ಬಾಲ್ಯದಿಂದಲೇ ಬರವಣಿಗೆಯ ಅಭಿರುಚಿ ಹೊಂದಿದ್ದ ಅವರು ಸಾವಿರಕ್ಕೂ  ಅಧಿಕ ಲೇಖನಗಳನ್ನು ಬರೆದಿದ್ದಾರೆ. ಸುಖದ ಗುಟ್ಟು ಮತ್ತು ಓ ಮನಸೇ ತಲ್ಲಣಿಸದಿರು ಎಂಬೆರಡು ಕೃತಿಗಳನ್ನು ಪ್ರಕಟಿಸಿದ್ದಾರೆ.









error: Content is protected !!
Scroll to Top