ಪ್ರಣವ್‌ ಮುಖರ್ಜಿ ಪಂಚಭೂತಗಳಲ್ಲಿ ಲೀನ

ದಿಲ್ಲಿ, ಸೆ.1 :ಮಾಜಿ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರ ಅಂತ್ಯಕ್ರಿಯೆ ದಿಲ್ಲಿಯಲ್ಲಿಂದು ಸಕಲ ಸೇನಾ ಗೌರವಗಳೊಂದಿಗೆ ನೆರವೇರಿತು. ಲೋಧಿ ಚಿತಾಗಾರದಲ್ಲಿ ಮುಖರ್ಜಿ ಪಂಚಭೂತಗಳಲ್ಲಿ ಲೀನವಾದರು. ಪುತ್ರ ಅಭಿಜಿತ್‌ ಮುಖರ್ಜಿ ಅಂತಿಮ ವಿಧಿಗಳನ್ನು ನೆರವೇರಿಸಿದರು.

ಕೊರೊನಾ ನಿರ್ಬಂಧಗಳಿರುವುದರಿಂದ ಸೇನಾ ವಾಹನದ ಬದಲಾಗಿ ಅಂಬುಲೆನ್ಸ್‌ ನಲ್ಲಿ ಮುಖರ್ಜಿ ಪಾರ್ಥಿವ ಶರೀರವನ್ನು ಚಿತಾಗಾರಕ್ಕೆ ತರಲಾಯಿತು. ಪಿಪಿಇ ಕಿಟ್‌ ಧರಿಸಿ ಅಂತಿಮ ವಿಧಿಗಳನ್ನು ನೆರವೇರಿಸಲಾಯಿತು. ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌, ಪ್ರಧಾನಿ ನರೇಂದ್ರ ಮೋದಿ, ಮೂರೂ ಸೇನಾಪಡೆಗಳ ದಂಡನಾಯಕ ಬಿಪಿನ್‌ ರಾವತ್‌ ಅಂತಿಮ ಗೌರವ ಸಲ್ಲಿಸಿದರು.





































error: Content is protected !!
Scroll to Top