ಅವರು ರಾಷ್ಟ್ರಪತಿಯಾಗಿದ್ದಾಗ 2017, ಜೂನ್ 18 ರಂದು ಉಡುಪಿ ಜಿಲ್ಲೆಗೆ ಒಂದು ಸಲ ಬಂದಿದ್ದರು. ರಾಜಾಂಗಣದಲ್ಲಿ ಆಯೋಜಿಸಿದ್ದ ಉಡುಪಿ ಜಿಲ್ಲಾಸ್ಪತ್ರೆಯ ಶಂಕುಸ್ಥಾಪನೆಯನ್ನು ನೆರವೇರಿಸಿದ್ದರು.
ಭಾರತದಲ್ಲಿ ಬಡವರಿಗೆ ಆರೋಗ್ಯ ಸೌಲಭ್ಯಗಳು ಸುಲಭದಲ್ಲಿ ಸಿಗಬೇಕು. ಸರ್ಕಾರಿ ಆಸ್ಪತ್ರೆಗಳಲ್ಲಿ ಹೆಚ್ಚು ವೈದ್ಯರ ನೇಮಕ ಆಗಬೇಕು ಎಂದು ಅವರು ಅಂದಿನ ಭಾಷಣದಲ್ಲಿ ಹೇಳಿದ್ದರು.





















