
ದಿಲ್ಲಿ,ಆ.30 : ಈ ತಿಂಗಳ ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ ಆಟಿಕೆ, ದೇಶಿ ತಳಿ ನಾಯಿ, ರೈತರು, ಯುವಕರು ಇತ್ಯಾದಿ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ.
ಭಾರತವನ್ನು ಜಾಗತಿಕ ಆಟಿಕೆಗಳ ತಯಾರಿಕೆ ಕೇಂದ್ರವಾಗಿ ಹೊರಹೊಮ್ಮಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ 2020ರಲ್ಲಿ ಆಟಿಕೆಗಳ ಮೇಲೆ ಗಮನ ಹರಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಆಟಿಕೆಗಳ ಮೇಲೆ ಗಮನ ಹರಿಸಲಾಗುತ್ತಿದೆ. ಆಡುವಾಗ ಕಲಿಯುವುದು, ಆಟಿಕೆಗಳು ತಯಾರಿಸುವುದು ಇತ್ಯಾದಿ ಪಠ್ಯಕ್ರಮದ ಒಂದು ಭಾಗವಾಗಿದೆ ಎಂದು ಮೋದಿ ಹೇಳಿದರು.
ಮೋದಿ ಮಾತಿನ ಲಹರಿ ಹೀಗಿತ್ತು:
-ಲಾಕ್ ಡೌನ್ ಸಮಯದಲ್ಲಿ ಮಕ್ಕಳ ಬಗ್ಗೆ ಚಿಂತಿಸಿದೆ. ಭಾರತವನ್ನು ಆಟಿಕೆಗಳ ತಯಾರಿ ಕೇಂದ್ರವನ್ನಾಗಿ ಮಾಡುವ ಕುರಿತು ಚರ್ಚಿಸಿದ್ದೇನೆ.ಜಾಗತಿಕ ಆಟಿಕೆ ಮಾರುಕಟ್ಟೆ ವಾರ್ಷಿಕ 7 ಲಕ್ಷ ಕೋ. ರೂ. ವಹಿವಾಟು ಹೊಂದಿದೆ. ಅದರೆ ಇದರಲ್ಲಿ ಭಾರತದ ಪಾಲು ಅತ್ಯಲ್ಪ.
-ಕೊರೊನಾ ಸಂಕಷ್ಟ ಕಾಲದಲ್ಲೂ ತಮ್ಮ ಕಾಯಕ ನಿಷ್ಠೆ ತೋರಿಸಿದ ರೈತರನ್ನು ಶ್ಲಾಘಿಸುತ್ತಾ ಖಾರಿಫ್ ಇಳುವರಿ ಕಳೆದ ವರ್ಷಕಿಂತ ಶೇ.7 ಹೆಚ್ಚಾಗಿದೆ ಮತ್ತು ಹತ್ತಿಯ ಇಳುವರಿ ಶೇ.3 ಹೆಚ್ಚಿದೆ ಎಂದು ತಿಳಿಸಿದರು.
-ಲಾಕ್ ಡೌನ್ ಸಂದರ್ಭದಲ್ಲಿ ಹಬ್ಬಗಳನ್ನು ಆಚರಿಸುವಾಗ ಜನರು ತೋರಿಸಿದ ಶಿಸ್ತನ್ನು ಶ್ಲಾಘಿಸಿದರು.
-ಕಂಪ್ಯೂಟರ್ ಗೇಮ್ ಆವಿಷ್ಕರಿಸಲು ಯುವಕರಿಗೆ ಕರೆ ನೀಡಿ ನೀತಿ ಆಯೋಗದ ಡಿಗಿಟಲ್ ಇಂಡಿಯಾ ಮತ್ತು ಆತ್ಮ ನಿರ್ಭರ್ ಭಾರತ ಇನ್ನೋವೇಟ್ ಚಾಲೆಂಜ್ ಅಡಿಯಲ್ಲಿ ಪ್ರೋತ್ಸಾಹ ನೀಡುವ ಭರವಸೆ.
-ಸೆಪ್ಟೆಂಬರ್‌ನಲ್ಲಿ ಪೌಷ್ಟಿಕಾಂಶ ಮಾಸಾಚರಣೆ ಮಾಡಲಾಗುತ್ತದೆ. ಗರ್ಭಿಣಿಯರಿಗೆ ಮತ್ತು ಮಕ್ಕಳಿಗೆ ಪೌಷ್ಟಿಕ ಅಹಾರ ಅತಿ ಅಗತ್ಯ.
-ಭದ್ರತಾ ಪಡೆಗಳ ಕಾರ್ಯಾಚರಣೆ ಸಂದರ್ಭದಲ್ಲಿ ಶ್ವಾನಗಳು ನಿರ್ವಹಿಸುತ್ತಿರುವ ಪಾತ್ರದ ಬಗ್ಗೆ ಮೆಚ್ಚುಗೆ. ವಿದಾ ಮತ್ತು ಸೋಫಿ ಶ್ವಾನಗಳ ಸೇವೆ ಸ್ಮರಣೆ. ಸ್ಥಳೀಯ ತಳಿಯ ನಾಯಿಗಳನ್ನು ಸಾಕಲು ಜನರಿಗೆ ಮನವಿ.
-ದೇಶ ಸ್ವಾವಲಂಬನೆ ಸಾಧಿಸಲು ಸಾಧ್ಯವಾಗುವ ಪ್ರತಿಯೊಂದು ಉಪಕ್ರಮವನ್ನು ಬೆಂಬಲಿಸಲು ಮನವಿ.
pl add option to add friends to this group